ಆಸ್ಪತ್ರೆಯಿಂದ ಪರಾರಿಯಾದ ಆರೋಪಿ ಅರೆಸ್ಟ್..!

crime, arrest, suspected

(ನ್ಯೂಸ್ ಕಡಬ) newskadaba.com ಸುಳ್ಯ, ಅ.28. ಆಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಘವನ್ ಕೆದೀಶ್ವರನ್ ಆಲಿಯಾಸ್ ಕೋಳಿ ಕರಣ್ ಎಂದು ಗುರುತಿಸಲಾಗಿದೆ.

ಕಳ್ಳತನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ, ಸುಳ್ಯ ಪೊಲೀಸ್ ಠಾಣೆಗೆ ಬೇಕಾಗಿದ್ದ ಆರೋಪಿ ರಾಘವನ್ ಕೆದೀಶ್ವರನ್ ನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಬಂಧಿಸಿ ಕರೆ ತಂದ ಸಂದರ್ಭದಲ್ಲಿ ಆತ ಸುಳ್ಯದ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಪೊಲೀಸರು ಆರೋಪಿಯನ್ನು ತಮಿಳುನಾಡಿನ ಸತ್ಯಮಂಗಲ ಎಂಬಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.

Also Read  ಮಾಂಸದಂಗಡಿ ಮಾಲೀಕನ ಮೇಲೆ ತಲವಾರು ದಾಳಿ ಪ್ರಕರಣ ➤ ಮೂವರು ಶಂಕಿತ ಆರೋಪಿಗಳು ವಶಕ್ಕೆ

 

 

error: Content is protected !!
Scroll to Top