ಲೋಕಾಯುಕ್ತ: ಇನ್ನು ಯಾವುದೇ ಕ್ಷಣದಲ್ಲಿ ಸಿದ್ಧರಾಮಯ್ಯರಿಗೆ ಲೋಕಾಯುಕ್ತ ನೋಟಿಸ್ ರವಾನಿಸಬಹುದು

(ನ್ಯೂಸ್ ಕಡಬ) newskadaba.com ಅ.26,ಬೆಂಗಳೂರು: ಮೂಡಾದಲ್ಲಿ ಆಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ವತಮ್ಮ ಅವರನ್ನು ವಿಚಾರಣೆ ನಡೆಸಿದ ಬೆನ್ನಲ್ಲೇ, ಇದೀಗ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಯಾವುದೇ ಕ್ಷಣದಲ್ಲಾದರೂ ನೋಟೀಸ್ ನೀಡುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಸ್ವತಃ ಸಿದ್ದರಾಮಯ್ಯ ಅವರೇ ಮೊದಲ ಆರೋಪಿಯಾಗಿರುವ ಹಿನ್ನಲೆಯಲ್ಲಿ ಪೊಲೀಸರು ಮುಂದಿನ ವಾರ ವಿಚಾರಣೆಗೆ ಬರುವಂತೆ ನೋಟೀಸ್ ನೀಡಲು ಸಜ್ಜಾಗಿದ್ದಾರೆ. ಮುಡಾ ಕೇಸ್ನಲ್ಲಿ ಈಗಾಗಲೇ ಎ2, ಎ3 ಮತ್ತು ಎ4 ವಿಚಾರಣೆ ನಡೆಸಲಾಗಿದೆ. ಈಗ ಬಾಕಿ ಇರುವುದು ಎ1 ಆರೋಪಿ ವಿಚಾರಣೆ ಮಾತ್ರ. ಅಂದರೆ ಸಿದ್ದರಾಮಯ್ಯ ಅವರನ್ನು ವಿಚಾರಣೆ ನಡೆಸಲು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಿದ್ದಾರೆ.

Also Read  ಬಹುಮತ ಸಾಬೀತಿಗೆ ಕ್ಷಣ ಗಣನೆ ► ನಾಪತ್ತೆಯಾಗಿದ್ದ ಓರ್ವ ಶಾಸಕ ಸದನಕ್ಕೆ

ಪ್ರಕರಣದ ಆರೋಪಿಗಳನ್ನು ವಿಚಾರಣೆ ನಡೆಸುವುದು ಇಲ್ಲವೇ, ಬಂಧಿಸುವುದು ತನಿಖಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೇಳಿತ್ತು. ಸಿದ್ದರಾಮಯ್ಯ ಅವರ ಮೇಲೆ ಆರೋಪ ಕೇಳಿ ಬಂದ ಕಾರಣ ವಿಚಾರಣೆಗೆ ಎದುರಾಗುವುದು ಅನಿವಾರ್ಯವಾಗಿದೆ.

error: Content is protected !!
Scroll to Top