ಪತ್ನಿಯನ್ನು ಚುಡಾಯಿಸಿದ್ದಕ್ಕೆ ಯುವಕನ ಎದೆಗೆ ಚಾಕುವಿನಿಂದ ಇರಿದು ಕೊಲೆಗೈದ ಪತಿ

Crime

(ನ್ಯೂಸ್ ಕಡಬ) newskadaba.com ಕೋಲಾರ, ಅ.26. ಪದೇಪದೆ ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಪತಿಯೊಬ್ಬ ಚಾಕುವಿನಿಂದ ಇರಿದು ಕೊಲೆಗೈದಿರುವುದು ಘಟನೆ ನಡೆದಿದೆ.

ಕೊಲೆಯಾದ ಯುವಕನನ್ನು ರೋಹಿದ್ ಅಲಿಯಾಸ್ ಅರ್ಬಾಜ್ (25) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಅಮ್ಜದ್ ಎಂದು ಗುರುತಿಸಲಾಗಿದೆ. ರೋಹಿದ್ ಕೆಲ ದಿನಗಳಿಂದ ಅಮ್ಜದ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ. ಇದೇ ವಿಚಾರವಾಗಿ ರೋಹಿದ್‌ಗೆ ಅಮ್ಜಾದ್ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದ. ಆದರೆ ತನ್ನ ಹಳೇ ಚಾಳಿ ಮುಂದುವರಿಸಿದ್ದ ರೋಹಿದ್‌ನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ರೋಹಿಸ್‌ನ ಎದೆಗೆ ಚಾಕುವಿನಿಂದ ಇರಿದು ಅಮ್ಜಾದ್ ಕೊಲೆ ಮಾಡಿದ್ದು ಆರೋಪಿಯನ್ನು ಕೋಲಾರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Also Read  ಮಡಿವಾಳ ಮಾಚಿದೇವರ ವಚನಗಳ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಬೇಕು ►ಶಾಸಕ ಡಾ. ಭರತ್ ಶೆಟ್ಟಿ ವೈ

error: Content is protected !!
Scroll to Top