ಕಡಬ ತಹಶೀಲ್ದಾರ್ ವರ್ಗಾವಣೆ ಸಮ್ಮತವಲ್ಲ ► ವರ್ಗಾವಣೆ ಆದೇಶವನ್ನು ಸರಕಾರ ತಕ್ಷಣ ಹಿಂಪಡೆಯಬೇಕು: ಸಾಮಾಜಿಕ ಮುಖಂಡ ಮಹಮ್ಮದಾಲಿ

(ನ್ಯೂಸ್ ಕಡಬ) newskadaba.com ಕಡಬ, ಮಾ.20. ತಾಲೂಕು ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ಸಮಾಜಮುಖಿ ಚಿಂತನೆಯ ತಹಶೀಲ್ದಾರರನ್ನು ಬೇರೆಡೆಗೆ ವರ್ಗಾಯಿಸಿರುವ ಮಾಹಿತಿ ಇದ್ದು ಇದು ಸರಿಯಲ್ಲ. ಇವರ ವರ್ಗಾವಣೆ ಆದೇಶವನ್ನು ತಕ್ಷಣ ಸರಕಾರ ಹಿಂಪಡೆದು ಕಡಬದಲ್ಲಿಯೇ ಉಳಿಸಿಕೊಳ್ಳುವ ಕಾರ್ಯವಾಗಬೇಕು ಎಂದು ಕುಟ್ರುಪ್ಪಾಡಿ ಗ್ರಾ.ಪಂ. ಸದಸ್ಯ, ಸಾಮಾಜಿಕ ಮುಖಂಡ ಎಚ್.ಮಹಮ್ಮದಾಲಿ ಆಗ್ರಹಿಸಿದರು.

ಅವರು ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಡಬದ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತಿದ್ದ ಜಾನ್ ಪ್ರಕಾಶ್ ರೋಡ್ರಿಗಸ್ ಕಳೆದ ಒಂದು ವರ್ಷದಿಂದ ಜನಮಾನಸದಲ್ಲಿ ಉತ್ತಮ ಅಧಿಕಾರಿ ಎಂದು ಕರೆಸಿಕೊಂಡಿದ್ದರು. ಸಾರ್ವಜನಿಕರೊಂದಿಗಿನ ಇವರ ಸ್ಪಂದನೆ ಅಭೂತಪೂರ್ವ ವಾಗಿತ್ತು. ಅದರಲ್ಲೂ ಬಡವರ ಆಶಾಕಿರಣವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಡವ, ಶ್ರೀಮಂತ ಎನ್ನುವ ಬೇಧವಿಲ್ಲದೆ ಕೆಲಸ ಮಾಡುತ್ತಿದ್ದ ಅವರು ಯಾವುದೇ ಕಾಲಹರಣ ಮಾಡದೇ ಕಡತಗಳ ವಿಲೇವಾರಿ ಮಾಡುತ್ತಿದ್ದರು. 94 ಸಿ ಯಲ್ಲಿ ಅರ್ಜಿ ಸಲ್ಲಿಸಿರುವ ಬಡವರು ಹಾಗೂ ಮಹಿಳೆಯರಿಗೆ ಖುದ್ದಾಗಿ ದೂರವಾಣಿ ಕರೆಮಾಡಿ ತಾಲೂಕು ಕಛೇರಿಗೆ ಕರೆಸಿಕೊಂಡು 94 ಸಿ ಮಂಜೂರು ಪತ್ರವನ್ನು ನೀಡಿದ ನಿದರ್ಶನಗಳಿವೆ. ತಾಲೂಕು ಕೇಂದ್ರವಾಗಿ ಘೋಷನೆಯಾಗಿರುವ ಕಡಬಕ್ಕೆ ಇಂತಹ ದಕ್ಷ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಅನಿವಾರ್ಯತೆ ಇದೆ. ಈ ಹಿನ್ನಲೆಯಲ್ಲಿ ಇವರನ್ನು ಕಡಬದಲ್ಲಿಯೇ ಉಳಿಸಿಕೊಳ್ಳಬೇಕಿದೆ ಎಂದು ಆಗ್ರಹಿಸಿದ ಮಹಮ್ಮದಾಲಿ ರಾಜ್ಯ ಕಂದಾಯ ಮಂತ್ರಿಗಳು ಹಾಗೂ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

Also Read  ಮರ್ಧಾಳ: ಬಾರ್ ನ ಸಪ್ಲಾಯರ್ ಗೆ ಸೋಡಾ ಬಾಟ್ಲಿಯಿಂದ ಹಲ್ಲೆ ► ಗಾಯಾಳು‌ ಸಪ್ಲಾಯರ್ ಆಸ್ಪತ್ರೆಗೆ ದಾಖಲು

ಪತ್ರಿಕಾಗೋಷ್ಠಿಯಲ್ಲಿ ಕುಟ್ರುಪ್ಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಸದಸ್ಯ ಟಿ.ಎಂ.ಮ್ಯಾಥ್ಯು, ಬೆಳಂದೂರು ಗ್ರಾ.ಪಂ.ಮಾಜಿ ಅಧ್ಯಕ್ಷ ನಝೀರ್ ದೇವಸ್ಯ ಉಪಸ್ಥಿತರಿದ್ದರು.

error: Content is protected !!
Scroll to Top