ತಿರುಪತಿ: ಹೊಟೇಲ್ ಗಳಿಗೆ ಬಾಂಬ್ ಬೆದರಿಕೆ ಹಿಂದೆ ಉದಯನಿಧಿ ಸ್ಟ್ಯಾಲಿನ್ ಪತ್ನಿ ಕೈವಾಡ-ಇಮೇಲ್ ಸಂದೇಶ

(ನ್ಯೂಸ್ ಕಡಬ) newskadaba.com ಅ.26, ಹೈದರಬಾದ್: ತಿರುಪತಿಯ ಮೂರು ಪ್ರಮುಖ ಹೋಟೆಲ್‌ಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ.

ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್‌ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಉಪ ಮುಖ್ಯಮಂತ್ರಿ ಉದಯನಿಧಿ ಸ್ಟ್ಯಾಲಿನ್‌ ಅವರ ಪತ್ನಿ ಮತ್ತು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿ ಹೆಸರನ್ನು ಈ ಬೆದರಿಕೆ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಸಾಲದೆನ್ನುವಂತೆ ಮಾದಕವಸ್ತು ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಜಾಫರ್ ಸಾದಿಕ್‌ನ ಹೆಸರನ್ನೂ ಕಿಡಿಗೇಡಿಗಳು ಇ-ಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಈತನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯವು ಈ ಹಿಂದೆಯೇ ಅರೆಸ್ಟ್‌ ಮಾಡಿದೆ.

Also Read  ದುಬೈ ಕನ್ನಡಿಗರ ಕುಟುಂಬದ ಕಾಳಜಿ ಜವಾಬ್ದಾರಿ ಸರಕಾರ ವಹಿಸಲಿದೆ: ಗೃಹ ಸಚಿವ ಬೊಮ್ಮಾಯಿ

error: Content is protected !!
Scroll to Top