ಅಂಗನವಾಡಿ ಕೇಂದ್ರದಲ್ಲಿ ಭರ್ಜರಿ ಉದ್ಯೋಗಾವಕಾಶ – ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಅ.26. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿ ಸಲ್ಲಿಸಲು ಬೇಕಾದ ಮಾನದಂಡಗಳನ್ನು ಈ ಕೆಳಗಿನಂತಿವೆ.

ಹುದ್ದೆಯ ವಿವರ

ಉದ್ಯೋಗ ಇಲಾಖೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಹುದ್ದೆಗಳ ಹೆಸರು : ಕಾರ್ಯಕರ್ತೆ, ಸಹಾಯಕಿ

ಒಟ್ಟು ಹುದ್ದೆಗಳ ಸಂಖ್ಯೆ : 577

ಅಂಗನವಾಡಿ ಸಹಾಯಕಿ ಹುದ್ದೆಗಳ ಸಂಖ್ಯೆ : 106

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳ ಸಂಖ್ಯೆ : 471

ಅರ್ಹ ಅಭ್ಯರ್ಥಿಗಳಿಗೆ ಇರಬೇಕಾದ ಮಾನದಂಡಗಳು

ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 12ನೇ ತರಗತಿ / ಡಿಪ್ಲೊಮ ಇಸಿಸಿಇ / ತತ್ಸಮಾನ ಶಿಕ್ಷಣ ಪಡೆದಿರಬೇಕು.

ಅಂಗನವಾಡಿ ಸಹಾಯಕಿ ಹುದ್ದೆಗೆ 10ನೇ ತರಗತಿ ತೇರ್ಗಡೆಯಾಗಿರಬೇಕು.

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ತುಂಬಿರಬೇಕು. ಗರಿಷ್ಠ 35 ವರ್ಷ ವಯಸ್ಸು ದಾಟಿರಬಾರದು.

Also Read  ಏನೇ ಆದರೂ RSS ಕಛೇರಿ ತೆರೆಯಲು ಬಿಡುವುದಿಲ್ಲ- ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

ಇತರೆ ಹಿಂದುಳಿದ ವರ್ಗದವರಿಗೆ 3 ವರ್ಷ ಹಾಗೂ ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಹೊಂದಿರಲೇಬೇಕಾದ ಅಗತ್ಯ ದಾಖಲೆಗಳು:

ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ/ಪಿಯುಸಿ ಅಂಕಪಟ್ಟಿ

ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ

ವಾಸಸ್ಥಳ ದೃಢೀಕರಣ ಪತ್ರ

ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ

ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ

ಇತರೆ ಅಗತ್ಯ ದಾಖಲೆಗಳು

ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ:

ಮೊದಲು ನೀವು “karnemakaone.kar.nic.in/abcd/ApplicationForm_JA_org.aspx” ವೆಬ್‌ಗೆ ಭೇಟಿ ನೀಡಿ.

ಹುದ್ದೆ ಬಯಸುವ ಜಿಲ್ಲೆ ಬಾಗಲಕೋಟೆ >> ತಾಲ್ಲೂಕು >> ಅಧಿಸೂಚನೆ ಸಂಖ್ಯೆ >> ಹುದ್ದೆ’ ಆಯ್ಕೆ ಮಾಡಿ. ನಂತರ ಅರ್ಜಿ ಸಲ್ಲಿಸಲು ಬಯಸುವ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಿದರೆ ಆನ್‌ಲೈನ್‌ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಈ ಅರ್ಜಿಯಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಗಳನ್ನು ಭರ್ತಿ ಮಾಡಿ. ನಂತರ ಅಗತ್ಯ ದಾಖಲೆಗಳ ಆಯಾ ಹೆಸರಿರುವ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಅಪ್‌ಲೋಡ್ ಮಾಡಿ.

Also Read  ಸುಬ್ರಹ್ಮಣ್ಯ: ಅಪರಿಚಿತ ಮಹಿಳೆಯ ಮೃತದೇಹ ಪತ್ತೆ..!

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ಅಕ್ಟೋಬರ್‌ 16, 2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ನವೆಂಬರ್‌ 15, 2024.

error: Content is protected !!
Scroll to Top