ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಇಲ್ಲಿದೆ ಕೆಲವು ಪರಿಣಾಮಕಾರಿ ಮನೆಮದ್ದುಗಳು..!

(ನ್ಯೂಸ್ ಕಡಬ) newskadaba.com ಅ.26. ಇಂದಿನ ಆಹಾರ ಪದ್ದತಿಯಿಂದಾಗಿ ಪ್ರತಿಯೊಬ್ಬರಲ್ಲೂ ಹೊಟ್ಟೆಯ ಬೊಜ್ಜು ಇರುವುದು ಸರ್ವೇ ಸಾಮಾನ್ಯವಾಗಿದೆ. ಆದರೂ ಪುರುಷರಿಗಿಂತ ವಿವಾಹಿತ ಮಹಿಳೆಯರಲ್ಲಿ ಹೊಟ್ಟೆಯ ಬೊಜ್ಜಿನ ಪ್ರಮಾಣ ಅಧಿಕವಾಗಿದೆ. ಸುಮಾರು 98% ರಷ್ಟು ಮಹಿಳೆಯರಿಗೆ ಹೆರಿಗೆ ನಂತರ ಹೊಟ್ಟೆ ಬೊಜ್ಜು ಬೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಅವಿವಾಹಿತ ಯುವತಿಯರಲ್ಲೂ ಹೊಟ್ಟೆಯ ಬೊಜ್ಜು ಕಂಡುಬರುತ್ತಿದೆ. ಅಷ್ಟೇ ಏಕೆ ಇತ್ತೀಚೆಗಂತೂ ಮಕ್ಕಳಲ್ಲಿ ಬೊಜ್ಜು ಸಾಮಾನ್ಯವಾಗಿದೆ. ಒಂದು ಅಂದಾಜಿನ ಪ್ರಕಾರ ಒಟ್ಟು ಜನಸಂಖ್ಯೆಯ ಸುಮಾರು 82% ರಷ್ಟು ಜನರಿಗೆ ಹೊಟ್ಟೆಯ ಬೊಜ್ಜು ಇದ್ದೇ ಇರುತ್ತದೆ. ಇತ್ತೀಚಿಗೆ ತೀವ್ರವಾಗಿ ಬೆಳೆಯುತ್ತಿರುವ ಬೊಜ್ಜಿಗೆ ಆಧುನಿಕ ಜೀವನ ಶೈಲಿಯೇ ಮುಖ್ಯ ಕಾರಣ. ಅಧಿಕ ಕ್ಯಾಲರಿಯುಕ್ತ ಅಪೌಷ್ಟಿಕ ಆಹಾರ ಹಾಗೂ ದೈಹಿಕ ಚಟುವಟಿಕೆಗಳ ಅಭಾವ ಪ್ರಮುಖ ಕಾರಣಗಳಾಗಿವೆ.

ಅಧಿಕ ದೇಹದ ತೂಕ ವಿಶೇಷವಾಗಿ ಹೊಟ್ಟೆಯ ಬೊಜ್ಜು ಹೃದಯ ರೋಗಗಳು, ಹೃದಯಾಘಾತ, ಮಧುಮೇಹ, ಅಧಿಕ ರಕ್ತದೊತ್ತಡ, ಯಕೃತ್ತಿನ ಸಮಸ್ಯೆಗಳು, ಕೀಲು ಸವೆತ/ನೋವುಗಳು, ಇತ್ಯಾದಿಗಳಿಗೆ ಮುಕ್ತ ಆಹ್ವಾನದ ಸೂಚನೆಯಾಗಿರುತ್ತದೆ.

ಆದ್ದರಿಂದ, ಅಧಿಕ ದೇಹದ ತೂಕವನ್ನು ಲಘುವಾಗಿ ಪರಿಗಣಿಸದೆ ಅದನ್ನು ಆದಷ್ಟು ಶೀಘ್ರ ಕಡಿಮೆ ಮಾಡಿಕೊಳ್ಳುವುದು ಆರೋಗ್ಯಕ್ಕೆ ಉತ್ತಮ. ನೀವು ಮೊದಲಿಗೆ ತೂಕ ಹೆಚ್ಚಾಗುವುದನ್ನು ಗಮನಿಸುವುದಿಲ್ಲ. ಆದರೆ ತೂಕ ಹೆಚ್ಚಾದಾಗ, ಅದನ್ನು ಕಳೆದುಕೊಳ್ಳಲು ನೀವು ಬೆವರು ಸುರಿಸುತ್ತಾ ಇರಬೇಕಾಗುತ್ತದೆ. ಮುಂಚಿತವಾಗಿಯೇ ತೂಕ ಹೆಚ್ಚಾಗದಂತೆ ಕಾಳಜಿ ವಹಿಸುವುದು ಹೆಚ್ಚು ಪ್ರಯೋಜನಕಾರಿ. ಆದರೂ, ಈಗಾಗಲೇ ಬೊಜ್ಜು ಬೆಳೆದಿದ್ದರೆ ಈ ಮನೆಮದ್ದುಗಳ ಸಹಾಯದಿಂದ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬಹುದು.

Also Read  ಕ್ಯಾಟರಾಕ್ಟ್ (ಕಣ್ಣಿನ ಪೊರೆ) ಬಗ್ಗೆ ಒಂದಿಷ್ಟು ಮಾಹಿತಿ - ಮುರಲೀ ಮೋಹನ ಚೂಂತಾರು

ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಟೊಮೆಟೊ, ದಾಲ್ಚಿನ್ನಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಏಕೆಂದರೆ, ಉಪ್ಪಿನಲ್ಲಿರುವ ಸೋಡಿಯಂ ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸಿ ಬೊಜ್ಜು ಹೆಚ್ಚಿಸುತ್ತದೆ.

ರಾತ್ರಿ ಮಲಗುವ ಮುನ್ನ ಹಸಿರು ಚಹಾ (ಗ್ರೀನ್ ಟೀ) ಕುಡಿಯುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಿ.

ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಶುದ್ಧ ಮೊಸರು (ಕೆನೆರಹಿತ) ಇದ್ದರೆ, ಅದು ನಿಮ್ಮ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಲವಂಗ ಹಸಿ ಬೆಳ್ಳುಳ್ಳಿ ತಿನ್ನುವುದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Also Read  ಅತಿಯಾದ ಸಕ್ಕರೆ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಅಪಾಯ

ನೀವು ಸಾಕಷ್ಟು ನಿದ್ದೆ ಮಾಡದಿದ್ದರೆ, ನಿಮ್ಮ ತೂಕವು ಹೆಚ್ಚುತ್ತದೆ. ನಿದ್ದೆ ಚೆನ್ನಾಗಿದ್ದರೆ ಜೀರ್ಣಶಕ್ತಿ ಹೆಚ್ಚುತ್ತದೆ ಮತ್ತು ಅಧಿಕ ಕೊಬ್ಬು ಸಂಗ್ರಹವಾಗುವುದಿಲ್ಲ. ಬೆಳಿಗ್ಗೆ ಹಸಿದ ವೇಳೆ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.

ಯೋಗವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ನೌಕಾಸನ ಯೋಗವು ಹೊಟ್ಟೆಯನ್ನು ಕಡಿಮೆ ಮಾಡಲು ಉತ್ತಮವಾಗಿದೆ.
ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮಿಶ್ರಣ ಮಾಡಿ ಪ್ರತಿದಿನ ಬೆಳಿಗ್ಗೆ ಇದನ್ನು ಸೇವಿಸುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆಯು ಉತ್ತಮವಾಗಿರುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ರಾತ್ರಿಯ ಊಟದಲ್ಲಿ ಲಘು ಆಹಾರವನ್ನು ಸೇವಿಸಿ. ಎಣ್ಣೆಯುಕ್ತ, ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ.

error: Content is protected !!
Scroll to Top