ಲಾರೆನ್ಸ್ ಬಿಷ್ಣೋಯ್‌ ಸಂದರ್ಶನ ಪ್ರಕರಣ- 2 ಡಿಎಸ್‌ಪಿ ಸೇರಿ 7 ಪಂಜಾಬ್ ಪೊಲೀಸರ ಅಮಾನತು

(ನ್ಯೂಸ್ ಕಡಬ) newskadaba.com ನವದೆಹಲಿ, ಅ.26. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ 2022 ರಲ್ಲಿ ಜೈಲಿನಿಂದ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳು ಮತ್ತು ಏಳು ಪಂಜಾಬ್ ಪೊಲೀಸರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.

ಶುಕ್ರವಾರ ರಾಜ್ಯ ಗೃಹ ಕಾರ್ಯದರ್ಶಿ ಗುರುಕಿರತ್ ಕಿರ್ಪಾಲ್ ಸಿಂಗ್ ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಅಮಾನತುಗೊಂಡ ಇತರ ಪೊಲೀಸರಲ್ಲಿ ಸಬ್-ಇನ್‌ಸ್ಪೆಕ್ಟರ್ ರೀನಾ, ಸಿಐಎ, ಖರಾರ್, ಸಬ್-ಇನ್‌ಸ್ಪೆಕ್ಟರ್ ಜಗತ್ಪಾಲ್ ಜಂಗು, ಎಜಿಟಿಎಫ್, ಸಬ್-ಇನ್‌ಸ್ಪೆಕ್ಟರ್ ಶಗಂಜಿತ್ ಸಿಂಗ್ , ಮತ್ತು ಹೆಡ್ ಕಾನ್‌ಸ್ಟೆಬಲ್ ಓಂ ಪ್ರಕಾಶ್ ಸೇರಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಅವರನ್ನು ಜೈಪುರ ಸೆಂಟ್ರಲ್ ಜೈಲಿನಲ್ಲಿ ಸಂದರ್ಶಿಸಲಾಗಿದೆ ಎಂಬುದಕ್ಕೆ ವಿಶೇಷ ತನಿಖಾ ತಂಡವು ರಾಜಸ್ಥಾನ ಪೊಲೀಸರಿಗೆ ಪುರಾವೆಗಳನ್ನು ಸಲ್ಲಿಸಿದೆ.

Also Read  ಮಂಗಳೂರು: ಗಾಂಜಾ ಸೇವನೆ…! ಆರೋಪಿಗಳು ವಶಕ್ಕೆ

error: Content is protected !!
Scroll to Top