ಕಲುಷಿತ ನೀರು ಕುಡಿದು 70 ಮಂದಿ ಅಸ್ವಸ್ಥ..!

(ನ್ಯೂಸ್ ಕಡಬ) newskadaba.com ಧಾರವಾಡ, ಅ.26. ಕಲುಷಿತ ನೀರು ಕುಡಿದು 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಟಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಬಳಿಕ ಹಲವರಲ್ಲಿ ವಾಂತಿ ಹಾಗೂ ಅತಿಸಾರ ಕಾಣಿಸಿಕೊಂಡಿದೆ. ಅಸ್ವಸ್ಥಗೊಂಡ 70 ಮಂದಿಯ ಪೈಕಿ 10 ಮಂದಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾಗೂ 36 ಮಂದಿ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಔಷಧಿ ಪಡೆದುಕೊಂಡ ಪರಿಣಾಮ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಗನ್ನಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಆದೇಶ ಹೊರಡಿಸಿದ್ದಾರೆ.

Also Read  ಸಸಿ/ ಕಸಿ ಗಿಡಗಳ ಸರಬರಾಜು - ಖಾಸಗಿ ನರ್ಸರಿಗಳಿಂದ ಅರ್ಜಿ ಆಹ್ವಾನ

error: Content is protected !!
Scroll to Top