(ನ್ಯೂಸ್ ಕಡಬ) newskadaba.com ಕ್ಯಾನ್ ಬೆರಾ, ಅ.25. ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಹಿನ್ನೆಲೆ ಡೇವಿಡ್ ವಾರ್ನರ್ ಅವರು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅಜೀವ ನಾಯಕತ್ವ ನಿಷೇಧಕ್ಕೊಳಗಾಗಿದ್ದರು. ಇದೀಗ ಅವರ ಮೇಲೆ ವಿಧಿಸಿದ್ದ ಅಜೀವ ನಾಯಕತ್ವ ನಿಷೇಧವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹಿಂಪಡೆದಿದೆ.
ವಾರ್ನರ್ ಮೇಲೆ ಹೇರಲಾಗಿದ್ದ ಆಜೀವ ನಾಯಕತ್ವದ ನಿಷೇಧವನ್ನು ಹಿಂತೆಗೆದುಕೊಳ್ಳುವುದರಿಂದ ಅವರು ಈಗ ಮತ್ತೆ ಆಸ್ಟ್ರೇಲಿಯಾದಲ್ಲಿ ಯಾವುದೇ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದಾಗಿದೆ. ಇದೀಗ ವಾರ್ನರ್ ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದರಿಂದ ಮುಂದಿನ ಬಿಬಿಎಲ್‌ನಲ್ಲಿ ವಾರ್ನರ್ ಸಿಡ್ನಿ ಥಂಡರ್ಸ್ ತಂಡದ ನಾಯಕನಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.