ಸವಣೂರು: ಸಿಡಿಲು ಬಡಿದು ಓರ್ವ ಮೃತ್ಯು ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಸವಣೂರು, ಮಾ.19. ಸಿಡಿಲು ಬಡಿದು ವ್ಯಕ್ತಿಯೋರ್ವರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಎಂಬಲ್ಲಿ ಸೋಮವಾರದಂದು ನಡೆದಿದೆ.

ಮೃತರನ್ನು ಪುಣ್ಚಪ್ಪಾಡಿ ಸಮೀಪದ ನೆಕ್ಕಿ ನಿವಾಸಿ ಕೇಪು ಎಂಬವರ ಪುತ್ರ ವಿಕಲಚೇತನರಾದ ಧನಂಜಯ(25) ಎಂದು ಗುರುತಿಸಲಾಗಿದೆ. ಧನಂಜಯರವರು ವಾಸಿಸುತ್ತಿದ್ದ ಮನೆಯ ಸಮೀಪದಲ್ಲಿದ್ದ ತೆಂಗಿನ ಮರಕ್ಕೆ ಬಡಿದ ಸಿಡಿಲಿನ‌ ಆಘಾತದಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಅಲ್ಲದೆ ಘಟನೆಯಲ್ಲಿ ಘಟನೆಯಲ್ಲಿ ಮೃತರ ಅಕ್ಕ ಗೀತಾ ಹಾಗೂ ದೊಡ್ಡಪ್ಪ ಕುಂಡ ಎಂಬವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Also Read  ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ ಕುಚ್ಚಲಕ್ಕಿ ಒದಗಿಸುವಂತೆ ಸರಕಾರಕ್ಕೆಶಿಫಾರಸ್ಸು► ಆಹಾರ ಆಯೋಗದ ಅಧ್ಯಕ್ಷ ಡಾ|ಎನ್.ಕೃಷ್ಣಮೂರ್ತಿ

error: Content is protected !!
Scroll to Top