ದೀಪಾವಳಿಗೆ ಏಕಮುಖ ವಿಶೇಷ ರೈಲು ಸಂಚಾರ

(ನ್ಯೂಸ್ ಕಡಬ) newskadaba.com .25, ಹುಬ್ಬಳ್ಳಿ: ದೀಪಾವಳಿ ಸಂದರ್ಭದಲ್ಲಿ ಅತೀ ದಟ್ಟಣೆಯಿರುವ ಪ್ರಯಾಣಿಕರನ್ನು  ನಿರ್ವಹಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯಿಂದ ಹೆಚ್ಚುವರಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗಿದೆ.

ರೈಲು ಸಂಖ್ಯೆ 07323 ಎಸ್ಎಸ್ಎಸ್ ಹುಬ್ಬಳ್ಳಿ-ಯಶವಂತಪುರ ಒನ್ ವೇ ವಿಶೇಷ ಎಕ್ಸ್‌ಪ್ರೆಸ್ ರೈಲು ಅ. 30ರಂದು ಎಸ್‌ಎಸ್ ಎಸ್ ಹುಬ್ಬಳ್ಳಿಯಿಂದ ಬೆಳಗ್ಗೆ 8ಕ್ಕೆ ಹೊರಟು ಅದೇ ದಿನ ಮಧ್ಯಾಹ್ನ 3.45ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.

Also Read  ಜಂಬೂಸವಾರಿ: ಸರಳ ದಸರಾಗೆ ಅರಣ್ಯ ಇಲಾಖೆಯಿಂದ ಐದು ಆನೆಗಳ ಪಟ್ಟಿ ಸಿದ್ದ

error: Content is protected !!
Scroll to Top