ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ 12 ಯೋಜನೆಗಳು: ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್

(ನ್ಯೂಸ್ ಕಡಬ) newskadaba.com .25, ಬೆಂಗಳೂರು: ಕೇಂದ್ರ ಸರಕಾರವು ಸಂಘಟಿತವಲ್ಲದ ಕಾರ್ಮಿಕ ವಲಯಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಶ್ರಮ್ ಪೋರ್ಟಲ್ ನಲ್ಲಿ 12 ಯೋಜನೆಗಳನ್ನು ಒಟ್ಟುಗೂಡಿಸಿ ‘ಇಶ್ರಮ್-ಒನ್ ಸ್ಟಾಪ್ ಪರಿಹಾರ’ ಎಂಬುದನ್ನು ಪ್ರಾರಂಭಿಸಿದೆ. ಇದು ಅಸಂಘಟಿತ ವಲಯದ ಉದ್ಯೋಗಿಗಳಿಗೆ ಪ್ರೋತ್ಸಾಹಕವಾಗಿದೆ.

ವಿವಿಧ ಯೋಜನೆಗಳು ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ  ಸಂಯೋಜಿಸುವುದರಿಂದ ಸರ್ಕಾರದ ನಾನಾ ಯೋಜನೆಗಳ ಪ್ರಯೋಜನ ಪಡೆಯುವುದು ಕಾರ್ಮಿಕರಿಗೆ ಸುಲಭಸಾಧ್ಯ.ಅಸಂಘಟಿತ ಕಾರ್ಮಿಕರಿಗೆ ಮಾಹಿತಿಯ ಲಭ್ಯತೆಯ ಕೊರತೆ ಹಾಗೂ ಅನೇಕ ಕಾರಣಗಳಿಂದ ಸರ್ಕಾರದ ಪ್ರಯೋಜನಗಳನ್ನು ಪಡೆಯುವಲ್ಲಿ ವಿಫಲರಾಗಿರುತ್ತಾರೆ. ಆದರೆ ಶ್ರಮ್ ಪೋರ್ಟಲ್ ಎಲ್ಲ ಯೋಜನೆಗಳನ್ನು ಕ್ರೋಢೀಕರಿಸುವ ಮೂಲಕ ಕಾರ್ಮಿಕರು ಸುಲಭವಾಗಿ ಮಾಹಿತಿ ಪಡೆಯಬಹುದು. ಹಾಗೆಯೇ ವೆಬ್ ಸೈಟ್ ಮೂಲಕ ವಿವಿಧ ಯೋಜನೆಗಳಿಗೆ ಅರ್ಜಿಯನ್ನೂ ಸಲ್ಲಿಸಬಹುದು.

Also Read  ನಾಳೆ (ಜೂ.20) ವಿದ್ಯುತ್ ನಿಲುಗಡೆ

ಇದು ನೋಂದಣಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ ಕಾರ್ಮಿಕರಿಗೆ ಅರ್ಹವಾದ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಯೋಜನೆಗಳು ಆರೋಗ್ಯ ವಿಮೆ, ಪಿಂಚಣಿ ಯೋಜನೆ, ತುರ್ತು ಸಂದರ್ಭಗಳಲ್ಲಿ ಹಣಕಾಸಿನ ನೆರವು ಸೇರಿದಂತೆ ಅನೇಕಪ್ರಯೋಜನಗಳನ್ನು ನೀಡುತ್ತವೆ.

error: Content is protected !!
Scroll to Top