(ನ್ಯೂಸ್ ಕಡಬ) newskadaba.com ಅ.25, ನವದೆಹಲಿ: ವ್ಯಕ್ತಿಯ ವಯಸ್ಸನ್ನು ಧೃಡೀಕರಿಸಲು ಆಧಾರ್ ಕಾರ್ಡ್ ಸೂಕ್ತ ದಾಖಲೆ ಅಲ್ಲ ಎಂದು ಸುಪ್ರೀಂ ಕೊರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ರಸ್ತೆ ಅಪಘಾತದ ವೇಳೆ ಮೃತಪಟ್ಟವನಿಗೆ ಪರಿಹಾರ ಒದಗಿಸುವ ಸಲುವಾಗಿ ಅವನ ವಯಸ್ಸು ನಿರ್ಧರಿಸಲು ಆಧಾರ್ ಕಾರ್ಡನ್ನು ಆಧಾರವಾಗಿಟ್ಟುಕೊಂಡ ಪಂಜಾಬ್ ಹಾಗೂ ಹರ್ಯಾಣದ ಹೈ ಕೊರ್ಟ್ ತೀರ್ಪನ್ನು ರದ್ದುಗೊಳಿಸಿದೆ.
‘ಮೃತನ ವಯಸ್ಸನ್ನು ಬಾಲಾಪರಾಧಿ ನ್ಯಾಯ ಕಾಯ್ದೆ, 2015ರ ಸೆಕ್ಷನ್ 94ರ ಪ್ರಕಾರ ಆತನ ಶಾಲಾ ವರ್ಗಾವಣೆ ಪ್ರಮಾಣಪತ್ರದಲ್ಲಿ ನಮೂದಿಸಲಾಗಿರುವ ಜನನ ದಿನಾಂಕದ ಅನುಸಾರ ನಿರ್ಧರಿಸಬೇಕು’ ಎಂದು ನ್ಯಾ। ಸಂಜಯ್ ಕರೋಲ್ ಹಾಗೂ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಹೇಳಿದೆ.