ಆರೋಗ್ಯ & ಕುಟುಂಬ ಕಲ್ಯಾಣ ಸೊಸೈಟಿಯಲ್ಲಿ ಸರ್ಕಾರಿ ಕೆಲಸ – ಆಸಕ್ತರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಅ.24.  ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯಲ್ಲಿರುವ ವಿವಿಧ ಹುದ್ದೆಗಳಾದ ತಜ್ಞ ವೈದ್ಯರು, ನರ್ಸಿಂಗ್ ಸೇರಿದಂತೆ ಒಟ್ಟು 14 ಹುದ್ದೆಗಳು ಖಾಲಿಯಿದ್ದು, ಇದರ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರಿ ಉದ್ಯೋಗ ಪಡೆಯಲು ಆಸಕ್ತಿಯಿರುವ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 30ರಂದು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಮುನ್ನ ನೇಮಕಾತಿ ಕುರಿತು, ಆನ್‌ಲೈನ್ ಲಿಂಕ್, ಮಾಸಿಕ ವೇತನ, ವಯೋಮಿತಿ ಇತರ ಪೂರ್ಣ ಮಾಹಿತಿ ಇಲ್ಲಿದೆ.

 

ನೇಮಕಾತಿ ಸಂಸ್ಥೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಕೊಪ್ಪಳ

ಹುದ್ದೆ ಹೆಸರು: ತಜ್ಞ ವೈದ್ಯರು, ನರ್ಸಿಂಗ್

ಒಟ್ಟು ಹುದ್ದೆ: 14

ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 30

ವಯೋಮಿತಿ: ಕನಿಷ್ಠ 18- ಗರಿಷ್ಠ 45 ವರ್ಷ

ಪೋಸ್ಟಿಂಗ್ ಎಲ್ಲಿ: ಕೊಪ್ಪಳ

ಅರ್ಜಿ ಸಲ್ಲಿಕೆ: ಆನ್‌ಲೈನ್ ಹುದ್ದೆಗಳ ಇತರ ಮಾಹಿತಿ ನೋಡುವುದಾದರೆ, ಈ ಸೊಸೈಟಿಯಲ್ಲಿ ಅರಿವಳಿಕೆ ತಜ್ಞ, ಶಿಶುವೈದ್ಯ, ವಿಕಿರಣ ಸಂಬಂಧಿ ಹುದ್ದೆ ಸೇರಿ ತಲಾ 01, ನರ್ಸಿಂಗ್ ಅಧಿಕಾರಿ 11 ಸೇರಿ ಒಟ್ಟು 14 ಹುದ್ದೆಗಳು ಖಾಲಿ ಇವೆ.

Also Read  ಕಡಬ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಎನ್.ಕರುಣಾಕರ ಗೋಗಟೆ ಆಯ್ಕೆ

ಶೈಕ್ಷಣಿಕ ಅರ್ಹತೆ ಏನಿರಬೇಕು?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅರ್ಹ ಆಸಕ್ತ ಅಭ್ಯರ್ಥಿಗಳು DA, DNB, MD, DCH, BSC, GN ಕೋರ್ಸ್ ಮಾಡಿರಬೇಕು ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ. ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಎಂದು ಸೊಸೈಟಿ ಮಾಹಿತಿ ನೀಡಿದೆ.

ವಯಸ್ಸಿನ ಮಿತಿ

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಕೆಯ ಕೊನೆ ದಿನಾಂಕಕ್ಕೆ (ಅಕ್ಟೋಬರ್ 30) ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ದಾಟಿರಬಾರದು. ಜಾತಿ ಮೀಸಲಾತಿ ನೋಡಿಕೊಂಡು ಆಯಾ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಸಿಗಲಿದೆ. ಮಾಸಿಕ ವೇತನದ ಮಾಹಿತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವರು ಪಡೆದ ಮೆರಿಟ್ ಪಟ್ಟಿ ಆಧಾರದಲ್ಲಿ ಪರಿಗಣಿಸಿ ನಂತರ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಈ ಹುದ್ದೆಗಳಿಗೆ ಮಾಸಿಕ ರೂಪಾಯಿ 15,555 ರಿಂದ 1,30,000 ರೂ.ವರೆಗೆ ನೀಡಲಾಗುವುದು.

Also Read  'ಲೋಕಾಯುಕ್ತ ಮರು ಸ್ಥಾಪಿಸಿದ್ದೇ ಭ್ರಷ್ಟಾಚಾರ ನಿಗ್ರಹಕ್ಕೆ' ➤ ಸಿಎಂ ಬೊಮ್ಮಾಯಿ

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಮೂಲಕ ಕೂಡಲೇ ಇಲ್ಲಿರುವ ಆನ್‌ಲೈನ್ ಲಿಂಕ್ https://sevasindhuservices.karnataka.gov.in/ ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

error: Content is protected !!
Scroll to Top