ದ.ಕ.ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 105 ಪದಕ ಗೆದ್ದ ಹೈಫ್ಲೈಯರ್ಸ್ ಕ್ಲಬ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 24. ಕರ್ನಾಟಕ ರಾಜ್ಯ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಮಂಗಳೂರಿನ ಅಶೋಕನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಆಯೋಜಿಸಿದ ದ.ಕ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಂಗಳೂರಿನ ಹೈ-ಫ್ಲೈಯರ್ ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ ತಂಡವಾಗಿ ಪ್ರತಿನಿಧಿಸಿ 105 ಪದಕಗಳನ್ನು ಜಯಗಳಿಸಿದ್ದಾರೆ. ರಾಜ್ಯ ಮಟ್ಟಕ್ಕೆ ಕ್ಲಬ್ ನ 32 ಸ್ಕೇಟರ್ ಗಳು ಆಯ್ಕೆಯಾಗಿದ್ದಾರೆ. ಇವರು ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಮೋಹನ ದಾಸ್ ಕೆ., ಜಯರಾಜ್ ಮತ್ತು ರಮಾನಂದ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.


ಪದಕ ಪಡೆದ ಸ್ಕೇಟರ್ಸ್‌‌ ಗಳ ವಿವರ:

ತನ್ಮಯ್ ಕೊಟ್ಟಾರಿ, ಮುಹಮ್ಮದ್ ಶಾಮಿಲ್ ಅರ್ಷಾದ್, ಡಾಶಿಯಲ್ ಆಮಂಡಾ ಕಾನ್ಸೆಸ್ಸಾವ್, ಡೇನಿಯಲ್ ಸಾಲ್ವಡೋರ ಕಾನ್ಸೆಸ್ಸಾವ್ ತಲಾ ನಾಲ್ಕು ಚಿನ್ನ, ಶೀಹಾನ್ ಎ.ಆರ್. ರಿತ್ವಿಕಾ ಮಲ್ಯ, ಜೆಸ್ನಿಯಾ ಕೊರ್ರೆಯ ಶಾಲೋಮ್ ಕ್ರಿಸ್ಟಿನ್, ಗ್ರೀಷ್ಮಾ ಶೆಟ್ಟಿ , ಇದ್ಧಾಂತ್ ಯೋಗಿ, ಹಿಮಾನಿ ಕೆ.ವಿ., ಮುಹಮ್ಮದ್ ಆಯಾನ್ , ಲಕ್ಷ್ ಡಿ. ಎಸ್. ಗೌಡ ತಲಾ ಮೂರು ಚಿನ್ನ, ರೆಯಾನ್ಶ್ ಕೆ. 2 ಚಿನ್ನ , ಜೇನಿಷಾ, ಅಡಪಾ ಡೇವಿಡ್ ಆಚಾರ್ಯ ಚಲಾ 2 ಚಿನ್ನ, 1 ಬೆಳ್ಳಿ, ಶಿವಾಂಶ್ ಕೆ.ಪಿ. ಶೆಟ್ಟಿ , ಈಶಾನಿ ಕೆ.ವಿ., ಜಿಷ್ಣು , ಎಂ. ಆಕಾಂಶಾ ಪೈ ತಲಾ 1 ಚಿನ್ನ, 2 ಬೆಳ್ಳಿ , ಕೇಟ್ ಆರ್ವಿವಾಜ್ 1 ಚಿನ್ನ, 1 ಬೆಳ್ಳಿ, 1 ಕಂಚು, ಶ್ರೇಷ್ಟ್ ಮಲ್ಲಿ, ಮೌರ್ಯ ಕಿರಣ್ ಬಂಜನ್ ತಲಾ 1 ಚಿನ್ನ, 1 ಬೆಳ್ಳಿ, 1 ಕಂಚು, ಸ್ಪೃಹಾ ಜೈಶ್ವರ್, ಎ. ಡೇವಿನ ಮಹೇಶ್ ತಲಾ 3 ಬೆಳ್ಳಿ , ಡೆಲಿನಾ ಒಳಿಡಾ ಮೆಂಡೋನ್ಸ, ಅಕ್ಷೋಬ್ಯಾ ಜಿ.ಎಸ್., ಅನಿಕಾ ಸಚಿನ್ ಉಚ್ಚಿಲ್, ನೈವೇದ್ಯ ಪಾಂಡೇ ತಲಾ 2 ಬೆಳ್ಳಿ, 1 ಕಂಚು, ರಕ್ಷ್ ಡಿ.ಎಸ್ ಗೌಡ 2 ಬೆಳ್ಳಿ, ಪ್ರದ್ಯುಮ್ನ ರಾವ್ ಎಚ್., ಭೂಮಿಕಾ ವಿ. ಭಚ್, ಎಂ. ಅಮನ್ ಅರುಣ್ ಶೇಟ್ ತಲಾ 1 ಬೆಳ್ಳಿ, 1 ಕಂಚು ಅಮಯ್ ಸಚಿನ್ ಉಚ್ಚಿಲ 1 ಬೆಳ್ಳಿ , ನೀವೇದ್ ಅನಿಶ್ 3 ಕಂಚು, ಸನ್ನಿಧಿ ಪಿ. ಭಂಡಾರಿ 2 ಕಂಚು ಮೇಧಾಂಶ್ ನೇತ್ರಕೆರೆ 1 ಕಂಚಿನ ಪದಕವನ್ನು ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Also Read  ಕಲ್ಲುಗುಡ್ಡೆ: ಇಂದು ಬೆಳಿಗ್ಗೆ ಪುನಃ ತೆರೆದ ಮದ್ಯದಂಗಡಿ ► ಗ್ರಾಮಸ್ಥರಿಂದ ತೀವ್ರಗೊಂಡ ಪ್ರತಿಭಟನೆ

 

error: Content is protected !!
Scroll to Top