ಈ ಬಾಳೆಹಣ್ಣು ತಿಂದಲ್ಲಿ ಕ್ಯಾನ್ಸರ್ ಬರೋದು ಖಂಡಿತ..!

(ನ್ಯೂಸ್ ಕಡಬ) newskadaba.com ಅ.24. ಹೆಚ್ಚಿನ ಪ್ರೋಟೀನ್ ಹೊಂದಿರುವ ಹಣ್ಣುಗಳಲ್ಲಿ ಬಾಳೆಹಣ್ಣು ಒಂದು. ವರ್ಷವಿಡೀ ಲಭ್ಯವಿರುವ ಈ ಹಣ್ಣನ್ನು ಡಯಟ್ ಫುಡ್ ಆಗಿಯೂ ಬಳಸುತ್ತಾರೆ. ಇನ್ನು ಬಾಳೆ ಹಣ್ಣುಗಳಲ್ಲಿ ಹಲವಾರು ವಿಧಗಳಿವೆ. ಪಚ್ಚ ಬಾಳೆ, ಪುಟ್ಟ ಬಾಳೆ, ಏಲಕ್ಕಿ ಬಾಳೆ, ಸುಗಂಧಿ ಬಾಳೆ, ನೇಂದ್ರ ಬಾಳೆ, ಪೂಜೆ ಬಾಳೆ ಹೀಗೆ. ಆದರೆ ಇದೊಂದು ಬಾಳೆ ಹಣ್ಣು ತಿಂದ್ರೆ ನಿಮಗೆ ಕ್ಯಾನ್ಸರ್ ಬರೋದು ಮಾತ್ರ ಫಿಕ್ಸ್..!

ಈ ರೀತಿಯ ಬಾಳೆ ಹಣ್ಣು ತಿಂದರೆ ನಿಮಗೆ ಕ್ಯಾನ್ಸರ್ ಬರೋದು ಫಿಕ್ಸ್. ಅರೇ ಬಾಳೆಹಣ್ಣು ಕೂಡ ಅಪಾಯಕಾರಿಯೇ ಅದು ಹೇಗೆ ಎಂದು ನೀವು ಯೋಚನೆ ಮಾಡ್ತಾ ಇದ್ದೀರಾ. ಸದ್ಯ ಮಾರುಕಟ್ಟೆಯಲ್ಲಿ ಈ ಬಾಳೆಹಣ್ಣು ಹಣ್ಣಾಗಲು ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸುತ್ತಾರೆ. ಇವುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರಬಹುದು. ಬಾಳೆ ಹಣ್ಣುಗಳು ಬೇಗನೆ ಹಣ್ಣಾಗಲು ಕಾರ್ಬೈಡ್ ಅನ್ನು ಬಳಸಲಾಗುತ್ತಿದೆ. ಇಂತಹ ರಾಸಾಯನಿಕಗಳಿರುವ ಬಾಳೆಹಣ್ಣು ತಿಂದರೆ ಅವು ದೇಹವನ್ನು ಸೇರಿ ವಿಷವಾಗಿ ಬದಲಾಗುತ್ತದೆ. ಹಾಗಿದ್ರೆ ಈ ರೀತಿಯಾಗಿ ಕೆಮಿಕಲ್ ಮಿಶ್ರಿತವಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ಗುರುತಿಸುವುದು ಹೇಗೆ ಎಂದು ತಿಳಿಯುವುದು ಮುಖ್ಯ.

Also Read  ಶ್ರೀ ತಾಯಿ ಚಾಮುಂಡೇಶ್ವರಿ ನೆನೆಯುತ್ತಾ ಇಂದಿನ ದಿನ ಭವಿಷ್ಯವನ್ನು ತಿಳಿದುಕೊಳ್ಳಿ ಈ 8 ರಾಶಿಯವರಿಗೆ ಶುಭಫಲ ದೊರೆಯುತ್ತದೆ

ಕೆಮಿಕಲ್ ಮಿಶ್ರಿತ ಬಾಳೆಹಣ್ಣನ್ನು ಕಂಡುಹಿಡಿಯುವುದು ಹೇಗೆ?

ನೈಸರ್ಗಿಕವಾಗಿ ಮಾಗಿದ ಬಾಳೆ ಹಣ್ಣುಗಳು ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳು ತುಂಬಾ ಗಟ್ಟಿಯಾಗಿರುತ್ತವೆ. ಶುಚಿಯಾಗಿ, ದಪ್ಪವಾಗಿ ಕಾಣುವ ಬಾಳೆಹಣ್ಣನ್ನು ಒತ್ತಿದರೆ ಅದು ಪಕ್ವವಾಗಿದೆ ಎಂದು ತಿಳಿದು ಬಂದರೆ ಈ ಬಾಳೆಹಣ್ಣುಗಳು ರಾಸಾಯನಿಕಗಳಿಂದ ಕಲಬೆರಕೆಯಾಗಿದೆ ಎಂದು ಅರ್ಥ. ಇದರೊಂದಿಗೆ ಕುದಿಯುವ ನೀರನ್ನು ಬಕೆಟ್‌ಗೆ ಹಾಕಿ ಅದಕ್ಕೆ ಬಾಳೆಹಣ್ಣು ಹಾಕಿ.

ಇನ್ನು ಮಾಗಿದ ಬಾಳೆಹಣ್ಣುಗಳು ನೈಸರ್ಗಿಕವಾಗಿ ನೀರಿನಲ್ಲಿ ಮುಳುಗುತ್ತವೆ, ಆದರೆ ರಾಸಾಯನಿಕಗಳಿಂದ ಮಾಗಿದ ಬಾಳೆಹಣ್ಣುಗಳು ನೀರಿನಲ್ಲಿ ತೇಲುತ್ತವೆ. ಈ ರೀತಿಯಾಗಿ ನೀವು ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣುಗಳನ್ನು ಸುಲಭವಾಗಿ ಗುರುತಿಸಬಹುದು. ಕೊನೆಯದಾಗಿ ಬಾಳೆಹಣ್ಣುಗಳು ನೈಸರ್ಗಿಕವಾಗಿ ಹಣ್ಣಾಗಿದ್ದರೆ. ಅದು ಎಲ್ಲಾ ಕಡೆಯಿಂದ ಸಮಾನವಾಗಿ ಹಣ್ಣಾಗುತ್ತದೆ. ಇಲ್ಲದಿದ್ದರೆ, ಇದನ್ನು ರಾಸಾಯನಿಕವಾಗಿ ಹಣ್ಣಾಗಿರು ಬಾಳೆಹಣ್ಣು ಎಂದು ಗುರುತಿಸಬಹುದು.

error: Content is protected !!
Scroll to Top