ಸರಣಿ ಅಪಘಾತ: 7 ಕಾರು ಜಖಂ, ಮಗುವಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 24. ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಕುರಿತ ಅವಘಡಗಳ ನಡುವೆಯೇ ಇತ್ತ ಯಲಹಂಕದಲ್ಲಿ ಇಂದು ಮುಂಜಾನೆ ಸರಣಿ ಅಪಘಾತ ಸಂಭವಿಸಿದೆ.

ಯಲಹಂಕ ಮೇಲ್ಸೇತುವೆ ಮೇಲೆ ಇಂದು ಬೆಳಗ್ಗೆ 6 ರಿಂದ 6.30ರ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 7 ಕಾರುಗಳು ಅಪಘಾತಕ್ಕೀಡಾಗಿವೆ. ಪರಿಣಾಮ 7 ಕಾರುಗಳೂ ಒಂದರ ಹಿಂದೆ ಒಂದು ಗುದ್ದುಕೊಂಡು ಜಖಂ ಆಗಿದ್ದು, ಈ ಪೈಕಿ ಒಂದು ಕಾರಿನಲ್ಲಿದ್ದ ಮಗುವಿನ ಕೈಗೆ ಗಂಭೀರ ಗಾಯವಾಗಿದೆ. ಸದ್ಯ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.

Also Read  ಕಡಬ ತಾ| ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಡಾ| ತಿಲಕ್ ಎ.ಎ.

 

 

error: Content is protected !!
Scroll to Top