ಡಾನಾ ಚಂಡಮಾರುತ: ಅಂತಾರಾಷ್ಟ್ರೀಯ 2 ವಿಮಾನಗಳು ಸ್ಥಗಿತ

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಅ. 24. ಬಂಗಾಳಕೊಲ್ಲಿಯಲ್ಲಿ ಡಾನಾ ಚಂಡಮಾರುತ ರೂಪುಗೊಂಡಿದ್ದು, ಚಂಡಮಾರುತದ ಮುನ್ಸೂಚನೆಯಿಂದ ನೂರಾರು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೋಲ್ಕತ್ತಾ ಅಂತಾರಾಷ್ಟ್ರೀಯ ಎರಡು ವಿಮಾನಗಳನ್ನು 16 ಗಂಟೆಗಳವರೆಗೆ ಸ್ಥಗಿತಗೊಳಿಸಲಾಗಿದೆ.

ಮಂಗಳವಾರ ಸಂಜೆ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ತೀವ್ರಗೊಂಡು ತೀವ್ರ ಚಂಡಮಾರುತವಾಗಿ ಮಾರ್ಪಟ್ಟಿದ್ದು, ಅಕ್ಟೋಬರ್ 25ರ ಮುಂಜಾನೆ ಒಡಿಶಾ-ಪಶ್ಚಿಮ ಬಂಗಾಳ ಕರಾವಳಿಯನ್ನು ದಾಟಿ 100-110 ಮೈಲಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಮನೆಗಳು, ರಸ್ತೆಗಳು, ಬೆಳೆಗಳು ಮತ್ತು ವಿದ್ಯುತ್ ಮಾರ್ಗಗಳಿಗೆ ಹಾನಿ ಮತ್ತು ಪ್ರವಾಹ ಮತ್ತು ಭೂಕುಸಿತಗಳ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

Also Read  ಈಜುಕೊಳದಲ್ಲಿ ನಟಿ ರಾಧಿಕಾ ಮದನ್ ವರ್ಕೌಟ್, ವಿಡಿಯೋ ವೈರಲ್!

 

error: Content is protected !!
Scroll to Top