ನಿಶ್ಚಿತಾರ್ಥ ಮಾಡಿಸಿಕೊಂಡ ‘ಪಾರು’ ಧಾರವಾಹಿ ಖಳನಾಯಕಿ..!

(ನ್ಯೂಸ್ ಕಡಬ) newskadaba.com ಅ.23. ಕಿರುತೆರೆಯ ಪಾರು ಧಾರವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ಮಾನ್ಸಿ ಜೋಶಿ ಇದೀಗ ರಾಘವ್ ಎಂಬವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಫ್ಯಾನ್ಸ್ಗೆ ಶುಭ ಸುದ್ದಿ ಕೊಟ್ಟಿದ್ದಾರೆ. ನಟಿ ಮಾನ್ಸಿ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಸುಂದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಮಾನ್ಸಿ ಅವರು ಸಾಫ್ಟ್ವೇರ್ ಇಂಜಿನಿಯರ್ ರಾಘವ್ ಜೊತೆ ಬೆಂಗಳೂರಿನ ಬನಶಂಕರಿಯಲ್ಲಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಸಮಾರಂಭ ಜರುಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಮಾನ್ಸಿ ಮದುವೆ ನಡೆಯಲಿದೆ.

error: Content is protected !!