GST ಜಾರಿ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಇಳಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.01. ಶನಿವಾರದಿಂದ GST ಜಾರಿಯಾದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 3.42 ರು, ಮತ್ತು ಡೀಸೆಲ್ ದರ 3.57 ರು ಕಡಿತವಾಗಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ಬೆಂಗಳೂರಿನಲ್ಲಿ 57.80 ರು. ಇದ್ದ ಡೀಸೆಲ್ ದರ, ಶನಿವಾರ ಬೆಳಗ್ಗೆ 6 ಗಂಟೆಗೆ ಅನ್ವಯವಾಗುವಂತೆ 54.23 ರು.ಗೆ ಇಳಿಕೆಯಾಗಿದೆ. 67.66 ರು. ಇದ್ದ ಪೆಟ್ರೋಲ್ ದರ 64.24 ರು.ಗಳಿಗೆ ಇಳಿಕೆಯಾಗಿದೆ. ಅಂದರೆ ಡೀಸೆಲ್‍ಗೆ 3.57 ರೂ. ಕಡಿತವಾಗಿದ್ದರೆ, ಪೆಟ್ರೋಲ್‍ಗೆ 3.42 ರೂ.ನಷ್ಟು ಇಳಿಕೆಯಾಗಿದೆ. ಇದುವರೆಗೆ ಇದ್ದ ಬೇರೆ ಎಲ್ಲ ರೀತಿಯ ತೆರಿಗೆಗಳು ಹೋಗಿ, ಜಿಎಸ್ಟಿಯೊಂದೇ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡರಲ್ಲೂ ಈ ಪ್ರಮಾಣದ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

error: Content is protected !!
Scroll to Top