ಪುತ್ತೂರು ವಿಭಾಗದ KSRTC ಬಸ್‌ಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.23. ಕೆಎಸ್‌ಆರ್‌ಟಿಸಿ ವಿಭಾಗದ ನಿರ್ವಾಹಕರಿಗೆ ಈಗಾಗಲೇ 570 ಅಂಡ್ರಾಯಿಡ್ ಮಿಷನ್ ಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಮುಂದೆ ಪುತ್ತೂರು ವಿಭಾಗದ ಜಿಲ್ಲೆಯ 5 ತಾಲೂಕು ಹಾಗೂ ಕೊಡಗು ಜಿಲ್ಲೆಯ ಸರ್ಕಾರಿ ಬಸ್ಸು ನಿರ್ವಾಹಕರು ಯುಪಿಐ ಮೂಲಕ ಕ್ಯಾಶ್‌ಲೆಸ್ ವ್ಯವಸ್ಥೆಗೆ ತಮ್ಮನ್ನು ತಾವು ತೆರೆದುಕೊಳ್ಳಲಿದ್ದಾರೆ.

ಪುತ್ತೂರು ವಿಭಾಗದಲ್ಲಿ 5 ತಾಲೂಕುಗಳಲ್ಲಿ ಒಟ್ಟು ನಾಲ್ಕು ಡಿಪೋ ಹಾಗೂ ಮಡಿಕೇರಿಯ ಒಂದು ಡಿಪೋದಲ್ಲಿ ಈ ಮೆಷಿನ್ ವಿತರಣೆಯಾಗಿದೆ. ಸುಮಾರು 715 ಮಂದಿ ನಿರ್ವಾಹಕರು ಇರುವ ಈ 5 ಡಿಪೊಗಳಲ್ಲಿ 485 ಅನುಸೂಚಿತ ಮಾರ್ಗಗಳಿವೆ. ಇದಕ್ಕೆ ಏಕಕಾಲಕ್ಕೆ 485 ಮೆಷಿನ್‌ಗಳ ಅಗತ್ಯವಿದೆ. ಸುಮಾರು 270 ಹೆಚ್ಚುವರಿ ಮಿಷಿನ್ ಗಳನ್ನು ಪುತ್ತೂರು ವಿಭಾಗಕ್ಕೆ ತರಿಸಲಾಗಿದೆ. ಮೆಷಿನ್‌ಗಳಲ್ಲಿ ಏನಾದರೂ ತೊಂದರೆ ಕಂಡುಬಂದ ಸಂದರ್ಭ ತುರ್ತು ವ್ಯವಸ್ಥೆಗಾಗಿ ಈ ಹೆಚ್ಚುವರಿ ಮೆಷಿನ್‌ಗಳನ್ನು ತರಿಸಲಾಗಿದೆ.

Also Read  ಮಂಗಳೂರು: ತಾಲೂಕಿನ 3 ಕಡೆ ಅಪಾರ್ಟ್ಮೆಂಟ್ ರೂಪದಲ್ಲಿ 69 ಮನೆ ನಿರ್ಮಾಣ

 

error: Content is protected !!
Scroll to Top