2025 ರಲ್ಲಿ ಭಾರತದ ಆರ್ಥಿಕತೆ ಶೇ 7 ರಿಂದ ಶೇ 7.2 ರಷ್ಟು ಬೆಳವಣಿಗೆ: ಡೆಲಾಯ್ಟ್ ವರದಿ

(ನ್ಯೂಸ್ ಕಡಬ) newskadaba.com ಅ.23,  ಪಣಜಿ. ನವದೆಹಲಿಸರ್ಕಾರಿ ಹೂಡಿಕೆಗಳು ಮತ್ತು ಹೆಚ್ಚಿನ ಉತ್ಪಾದನೆಗಳ ಪ್ರಮಾಣ ಹೆಚ್ಚಳದಿಂದಾಗಿ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7-7.2ರ ಬೆಳವಣಿಗೆ ಕಾಣಬಹುದು. ಆದರೆ, ಜಾಗತಿಕವಾಗಿ ಹಣಕಾಸು ವರ್ಷದ ಮುನ್ನೋಟದ ಪರಿಣಾಮವನ್ನೂ ಎದುರಿಸಲಿದೆ ಎಂದು ಹಣಕಾಸು ಆಡಿಟ್ ಸಂಸ್ಥೆ ಡೆಲಾಯ್ಟ್ ಇಂಡಿಯಾ ಮಂಗಳವಾರ ಹೇಳಿದೆ.

ಉತ್ಪಾದನಾ ವಲಯದ ಅಭಿವೃದ್ಧಿ, ತೈಲ ಬೆಲೆಗಳಲ್ಲಿ ಸ್ಥಿರತೆ ಮತ್ತು ಚುನಾವಣೆಯ ನಂತರ ಅಮೆರಿಕದ ವಿತ್ತೀಯ ಸ್ಥಿರತೆ ಭಾರತದ ಬಂಡವಾಳ ಒಳಹರಿವು ಹೆಚ್ಚಿಸುತ್ತದೆ. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲೀನ ಹೂಡಿಕೆಗಳು ಮತ್ತು ಉದ್ಯೋಗಾವಕಾಶ ಹೆಚ್ಚಿಸಲಿದೆ ಎಂದು ಡೆಲಾಯ್ಟ್ ತನ್ನ ‘ಅಕ್ಟೋಬರ್ 2024 ರ ಇಂಡಿಯಾ ಎಕಾನಮಿ ಔಟ್‌ಲುಕ್‌ನಲ್ಲಿ ಹೇಳಿದೆ. ಮಾರ್ಚ್ 2025ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇಕಡಾ 6.7 ರಷ್ಟು ಬೆಳೆದಿದೆ. ಇದು ಐದು ತ್ರೈಮಾಸಿಕಗಳಲ್ಲಿ ನಿಧಾನಗತಿಯ ಬೆಳವಣಿಗೆ ಸೂಚಿಸುತ್ತದೆಯಾದರೂ, ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Also Read  ಉಳ್ಳಾಲ: ಕಾಲೇಜು ವಿದ್ಯಾರ್ಥಿನಿ ಸಮುದ್ರಪಾಲು

error: Content is protected !!
Scroll to Top