ಎಂಜಿನಿಯರಿಂಗ್ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದ ರೈತನ 9 ಎಕರೆ ಬೆಳೆ ನಾಶ

(ನ್ಯೂಸ್ ಕಡಬ) newskadaba.com ಕೋಲಾರ, ಅ.23. ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕೋಲಾರ ಜಿಲ್ಲೆಯ ಜನ್ನಘಟ್ಟ ಗ್ರಾಮದಲ್ಲಿ ಎಂಜಿನಿಯರ್ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದ ರೈತನ 9 ಎಕರೆ ಬೆಳೆ ನಾಶವಾಗಿದೆ.


ರೈತ ನಂದನ್ ಗೌಡ ಎಂಬುವವರು ಸಿವಿಲ್ ಎಂಜಿನಿಯರ್ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದರು. ಒಟ್ಟು 9 ಎಕರೆ ತೋಟದಲ್ಲಿ 7 ಎಕರೆ ಎಲೆ ಕೋಸು ಹಾಗೂ 2 ಎಕರೆ ಹೂ ಕೋಸನ್ನು ಬೆಳೆದಿದ್ದರು. ಜೊತೆಗೆ ಟೊಮ್ಯಾಟೊ, ಹೂವು, ಕ್ಯಾಪ್ಸಿಕಂ, ಪಪ್ಪಾಯವನ್ನು ಬೆಳೆದಿದ್ದರು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಕೋಟ್ಯಂತರ ರೂ. ವಿವಿಧ ಬೆಳೆಗಳು ನಾಶವಾಗಿವೆ.

Also Read  ಚಾಲಕನಿಲ್ಲದೆ ಶೋ ರೂಂಗೆ ನುಗ್ಗಿದ ಟ್ರಾಕ್ಟರ್ !

 

error: Content is protected !!
Scroll to Top