ರೇಂಜರ್ ಸ್ವಿಂಗ್ ತೊಟ್ಟಿಲಿನಿಂದ ಬಿದ್ದು ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com ವಿಜಯಪುರ, ಅ.23. ರೇಂಜರ್ ಸ್ವಿಂಗ್ ತೊಟ್ಟಿಲಿನಿಂದ ಬಿದ್ದು ಯುವತಿಯೊಬ್ಬಳು ಮೃತಪಟ್ಟ ಘಟನೆ ನಗರ ಹೂರವಲಯದ ಇಲ್ಲಿನ ಎ ಪಿ ಜೆ ಕಲಾಂ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟ ಯುವತಿಯನ್ನು ನಿಖಿತಾ ಅರವಿಂದ ಬಿರಾದಾರ (21) ಎಂದು ಗುರುತಿಸಲಾಗಿದೆ. ಎಪಿಜೆ ಕಲಾಂ ರಸ್ತೆಯಲ್ಲಿರುವ ಫಿಶ್ ಟನಲ್ ಎಕ್ಸ್ಪೋದಲ್ಲಿ ಅ.20ರಂದು ಈ ಅವಘಡ ಸಂಭವಿಸಿದೆ. ಅಂದು ಸಂಜೆ ನಿಖಿತಾ ಇನ್ನಿಬ್ಬರು ಗೆಳೆಯತಿಯರ ಜೊತೆ ತಲೆ ಕೆಳಗಾಗಿ ತೂಗಾಡಿಸುವ ರೇಂಜರ್ ಸ್ವಿಂಗ್ ತೊಟ್ಟಿಲಿನಲ್ಲಿ ಕುಳಿತಿದ್ದರು. ತೊಟ್ಟಿಲು ತಲೆ ಕೆಳಗಾಗಿ ತೂಗುತ್ತಿರುವಾಗಲೇ ನಿಖಿತಾ ಭಯದಿಂದ ಚೀರಾಡಿದ್ದಾರೆ. ಆದರೆ ಆಪರೇಟರ್ ರೇಂಜರ್ ಸ್ವಿಂಗ್ ನಿಲ್ಲಿಸಿಲ್ಲ ಎನ್ನಲಾಗಿದೆ. ಅಷ್ಟರಲ್ಲಿ ಕೆಳಗಡೆ ಬಿದ್ದ ರಭಸಕ್ಕೆ ನಿಖಿತಾರ ತಲೆ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ನಿಖಿತಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಖಿತಾ ಅದೇ ದಿನ ಮೃತಪಟ್ಟಿದ್ದಾರೆ. ಕಳಪೆ ಸೇಫ್ಟಿ ಬೆಲ್ಟ್ ಕಾರಣದಿಂದ ಈ ದುರಂತ ನಡೆದಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

Also Read  ರಷ್ಯಾ ಪ್ರವಾಸದ ನಂತರ ದೆಹಲಿಗೆ ಮರಳಿದ ಪ್ರಧಾನಿ ಮೋದಿ

 

error: Content is protected !!
Scroll to Top