ಶೀಘ್ರದಲ್ಲಿ ಕನ್ನಡ ಕಸ್ತೂರಿ ತಂತ್ರಾಂಶ ಲೋಕಾರ್ಪಣೆ: ಡಾ| ಬಿಳಿಮಲೆ

(ನ್ಯೂಸ್ ಕಡಬ) newskadaba.com .23,  ಬೆಂಗಳೂರು.  ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ  ಮಾಡುವ ಸಮರ್ಥ ಕನ್ನಡ ಕಸ್ತೂರಿ ತಂತ್ರಾಂಶವನ್ನು ಇ-ಆಡಳಿತ ಇಲಾಖೆ ಸಿದ್ಧಪಡಿಸಿದ್ದು, ಶೀಘ್ರದಲ್ಲಿಯೇ ಈ ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಕನ್ನಡ ಅಭಿವೃದ್ದಿ  ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯ ಸರಕಾರದ ಇ-ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗಿರುವ ಇ-ಕನ್ನಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಉದ್ದೇಶಿತ ತಂತ್ರಾಂಶವು ಇಂದಿನ ಖಾಸಗಿ ತಂತ್ರಾಂಶಗಳಿಂದ ಅತಿ ಹೆಚ್ಚು ದಕ್ಷತೆಯನ್ನು   ಹೊಂದಿದ್ದು ಸುಮಾರು 2.3 ಕೋಟಿ ಆಂಗ್ಲ ಹಾಗೂ ಕನ್ನಡ ಸಮಾನಾಂತರ ವಾಕ್ಯಗಳನ್ನು ಆಧರಿಸಿ ಸಿದ್ಧಗೊಳಿಸಿದೆ.

Also Read  ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್  ಸಚಿವ ಹೆಚ್.ಡಿ.ರೇವಣ್ಣಗೆ ಮಧ್ಯಂತರ ರಿಲೀಫ್ ನೀಡಿದ ಹೈಕೋರ್ಟ್

error: Content is protected !!
Scroll to Top