ಕಲುಷಿತ ನೀರು ಸೇವಿಸಿ ನವ ಜಾತ ಶಿಶು ಸೇರಿ 5 ಮಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ದಾವಣಗೆರೆ, ಅ.23. ಕಲುಷಿತ ನೀರು ಸೇವಿಸಿ ನವ ಜಾತ ಶಿಶು ಸೇರಿ ಐವರು ಮೃತಪಟ್ಟಿರುವ ಶಂಕೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರನ್ನು ಗ್ರಾಮದ ಸುರೇಶ್(30), ಮಹಾಂತೇಶ್(45)ಗೌರಮ್ಮ(60), ಹನುಮಂತಪ್ಪ(38), 8 ತಿಂಗಳ ಗಂಡು ಮಗು ಎಂದು ಗುರುತಿಸಲಾಗಿದೆ. ಐವತ್ತಕ್ಕೂ ಹೆಚ್ಚು ಜನರು ಭೇದಿಯಿಂದ ಬಳಲುತ್ತಿದ್ದು, ಒಂದೇ ದಿನ ಇಬ್ಬರ ಸಾವಾಗಿದೆ. ಕಳೆದ ವಾರ ಮೂವರು ಮೃತಪಟ್ಟಿದ್ದು, ಸರಣಿ ಸಾವಿನಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಶುದ್ಧ ನೀರು ಕೊಡದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read  ಆ. 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆ

 

error: Content is protected !!
Scroll to Top