ಬೆಂಗಳೂರು: ತಿಮಿಂಗಿಲದ ವಾಂತಿ ಸಾಗಾಟ: ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com .22 ಬೆಂಗಳೂರು: ಬೆಂಗಳೂರಿನಿಂದ  ತಮಿಳುನಾಡಿಗೆ ಕಾರಿನಲ್ಲಿ ತಿಮಿಂಗಿಲದ ವಾಂತಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ನಗರದ ಪೊಲೀಸರು ಹೊಸ ಅಣಗಳ್ಳಿ ರಾಷ್ಟ್ರಿಯ ಹೆದ್ದಾರಿಯಲ್ಲಿ ಬಂದಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಿ.ಟಿ ಕವಿತ ಡಿ ವೈ ಎಸ್ ಪಿ ಧರ್ಮೇಂದ್ರ ಸಿಐ ಶಿವಮಾದಯ್ಯ ಇವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯ ಪ್ರಕಾರ  ಕಾದು ಕುಳಿತ ಪೊಲೀಸರು ನಗರದ ಅಣಗಳ್ಳಿ ಬಳಿ ಬರುತ್ತಿದ್ದ ಕಾರನ್ನು  ತಡೆದು ಪರಿಶೀಲಿಸಿದಾಗ  ಕಾರಿನ ಡಿಕ್ಕಿಯಲ್ಲಿದ್ದ 4 ಕೆ.ಜಿ 386 ಗ್ರಾಂ ತಿಮಿಂಗಿಲ ವಾಂತಿ ಇರುವುದು ಪತ್ತೆಯಾಗಿದ್ದು ಪೊಲೀಸರು ಮೈಸೂರು ಆಶೋಕಪುರಂ ನಿವಾಸಿ  ವಸಂತ್ ಕುಮಾರ್ ಹಾಗೂ ರಾಮನಗರ ಜಿಲ್ಲೆಯ ಕನಕಪುರ ನಿವಾಸಿ ವೈರಮುಢಿ ಎಂಬವರನ್ನು ಬಂಧಿಸಿದ್ದಾರೆ.

Also Read  ಬೆಂಗಳೂರಿಗೆ ಲಗ್ಗೆ ಇಡಲಿದೆ ಅಧಿಕೃತ ಆ್ಯಪಲ್ ಸ್ಟೋರ್; ಕಂಪೆನಿಯಿಂದ ಘೋಷಣೆ

error: Content is protected !!
Scroll to Top