10 ಕೋಟಿ ಸದಸ್ಯರನ್ನು ಹೊಂದಿದ ಬಿಜೆಪಿ ವಿಶ್ವದಾಖಲೆ

(ನ್ಯೂಸ್ ಕಡಬ) newskadaba.com  ನವದೆಹಲಿ, ಅ. 22. ವಿಶ್ವದಲ್ಲಿಯೇ ಅತಿದೊಡ್ಡ ಕಾರ್ಯಕರ್ತರ ಪಡೆ ಹೊಂದಿರುವ ಬಿಜೆಪಿ ತನ್ನ ಸದಸ್ಯತ್ವ 10 ಕೋಟಿಯನ್ನು ತಲುಪುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಅಕ್ಟೋಬರ್ 11ರಿಂದ ಎರಡನೇ ಹಂತದ ಅಭಿಯಾನ ಆರಂಭಿಸಲಾಗಿದೆ. ಈ ತಿಂಗಳ ಅಂತ್ಯದವರೆಗೂ ನೋಂದಣಿ ಮುಂದುವರಿಯಲಿದೆ. ನಂತರ ನವೆಂಬರ್ 1ರಿಂದ 5ರವರೆಗೆ ಪರಿಶೀಲನೆಯ ಅವಧಿ ಇರುತ್ತದೆ. ಹೀಗಾಗಿ, ಪಕ್ಷವು ತನ್ನ ಹಿಂದಿನ ಗರಿಷ್ಠ 11 ಕೋಟಿ ಸದಸ್ಯರನ್ನು ಮೀರಿಸುವ ಗುರಿ ಹೊಂದಿದೆ. ದೈಹಿಕ ಮತ್ತು ಆನ್‌ಲೈನ್ ಮೂಲಕ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Also Read  ಮೇಘಾಲಯದಲ್ಲಿ ಲಘು ಭೂ ಕಂಪನ!

 

error: Content is protected !!
Scroll to Top