ಕೊನೆಗೂ ಕೂಡಿಬಂತು ಕಡಬ ತಾಲೂಕಿಗೆ ‘ಉದ್ಘಾಟನಾ ಭಾಗ್ಯ’ ► ಮಾ. 22 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ನೂತನ ಕಡಬ ತಾಲೂಕು ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.18. ಜಿಲ್ಲಾ ಉಸ್ತವಾರಿ ಸಚಿವ ಬಿ.ರಮಾನಾಥ ರೈ ಅವರು ನೂತನ ಕಡಬ ತಾಲೂಕನ್ನು ಅಧಿಕೃತವಾಗಿ ಉದ್ಘಾಟಿಸಲು ಮಾ. 22 ರಂದು ದಿನ ನಿಗದಿಯಾಗಿದ್ದು, ಕೊನೆಗೂ ತಾಲೂಕು ಅನುಷ್ಠಾನದ ಕುರಿತು ಕಡಬ ಪರಿಸರದ ಜನರ ಮನಸ್ಸಿನಲ್ಲಿ ಮೂಡಿದ್ದ ಆತಂಕಗಳು ದೂರವಾಗುವ ದಿನಗಳು ಹತ್ತಿರವಾಗಿದೆ.

ಮಾರ್ಚ್ 18 ಭಾನುವಾರದಂದು ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಕಡಬ ತಾಲೂಕು ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಈ ಹಿಂದೆ ಪ್ರಕಟಿಸಲಾಗಿತ್ತು. ಆದರೆ ಇದೀಗ ಉದ್ಘಾಟನಾ ಕಾರ್ಯಕ್ರಮದ ದಿನಾಂಕವನ್ನು ಮಾ. 22 ಕ್ಕೆ ಮುಂದೂಡಲಾಗಿದ್ದು, ಚುನಾವಣಾ ತುರ್ತಿನ ಕಾರಣದಿಂದಾಗಿ ಕಂದಾಯ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಸಚಿವ ರಮಾನಾಥ ರೈ ಅವರು ಕಡಬ ತಾಲೂಕು ಅನುಷ್ಠಾನ ಕಾರ್ಯಕ್ರಮವನ್ನು ಅಪರಾಹ್ನ 3 ಗಂಟೆಗೆ ಉದ್ಘಾಟಿಸುವುದರೊಂದಿಗೆ 1.50 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಡಬ ಮೆಸ್ಕಾಂ ವಿಭಾಗೀಯ ಕಚೇರಿ ಕಟ್ಟಡವನ್ನೂ ಉದ್ಘಾಟಿಸಲಿದ್ದಾರೆ. ಅದೇ ವೇಳೆ 4.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಡಬ ಸಮುದಾಯ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಲಿದ್ದಾರೆ. ಕಡಬ ತಹಶೀಲ್ದಾರ್ ಕಚೇರಿಯ ವಠಾರದಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಕಡಬ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಪಿ.ಪಿ.ವರ್ಗೀಸ್ ಅವರು ತಿಳಿಸಿದ್ದಾರೆ.

Also Read  ಗ್ರಾಹಕರ ಸೋಗಿನಲ್ಲಿ ಬಂದು 1.98ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಂಚನೆ

error: Content is protected !!
Scroll to Top