ಪೇಂಟಿಂಗ್ ಮಾಡುವ ವೇಳೆ 3ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com  ಬೀದರ್, ಅ. 22. ಮನೆಗೆ ಪೇಂಟಿಂಗ್ ಮಾಡುವಾಗ 3ನೇ ಮಹಡಿಯಿಂದ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ವಿದ್ಯಾನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಮೂಲತಃ ಬೀದರ್ ತಾಲೂಕಿನ ಮಂದಕನಹಳ್ಳಿ ಗ್ರಾಮದ ಇಮಾವೇಲ್(24) ಎಂದು ಗುರುತಿಸಲಾಗಿದೆ. ಯುವಕ ಮೂರನೇ ಮಹಡಿಗೆ ಹೋಗುವುದಿಲ್ಲ ಎಂದು ಹೇಳಿದ್ದರೂ ಕೂಡ ಒತ್ತಾಯ ಪೂರ್ವಕವಾಗಿ ಕಳುಹಿಸಿದ್ದಾರೆ. ಬಳಿಕ ಆತ ಪೇಟಿಂಗ್ ಮಾಡುವಾಗ ಮನೆಯ ಮಾಲೀಕ, ಗುತ್ತಿಗೆದಾರ ಹಾಗೂ ಎಂಜಿನಿಯರ್ ಸೇರಿ ಕಟ್ಟಡದ ಮೇಲಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Also Read  ಬೆಂಗಳೂರು: 12 ಮಂದಿ ಪಾಕಿಗಳ ಸೆರೆ ಹಿಡಿದ ಪೊಲೀಸರು

 

error: Content is protected !!