(ನ್ಯೂಸ್ ಕಡಬ) newskadaba.com ಅ. 22. ಅದೃಷ್ಟ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳುವುದು ಅಸಾಧ್ಯ ಅದರಲ್ಲೂ ಮೀನುಗಾರರಿಗೆ ಅದೃಷ್ಟ ಅನ್ನೋದು ಬಹಳ ಮುಖ್ಯವಾಗುತ್ತದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆಂದು ತಿಂಗಳುಗಟ್ಟಲೆ ಹೋಗಿ ಖಾಲಿ ಕೈಯಲ್ಲೂ ವಾಪಾಸ್ ಬರೋದಿದೆ. ಆದರೆ ಮಲ್ಪೆ ಮೀನುಗಾರರು ಭರ್ಜರಿ ತೊರಕೆ ಮೀನೊಂದನ್ನು ಭೇಟೆಯಾಡಿದ್ದಾರೆ.
ಸ್ಟಿಂಗ್ ರೇ ಎಂದು ಕರೆಯಲ್ಪಡುವ ಬೃಹತ್ ತೂಕದ ತೊರಕೆ ಮೀನು ಬಲೆಗೆ ಬಿದ್ದು ಮೀನುಗಾರರ ಅದೃಷ್ಟ ಖುಲಾಯಿಸಿದೆ. ಸುಮಾರು 250 ಕೆ.ಜಿ ತೂಗುವ ತೊರಕೆ ಮೀನು ಬಲೆಗೆ ಬಿದ್ದಿದ್ದು, ಇದು ಅಪರೂಪಕ್ಕೆ ಒಮ್ಮೆ ಸಿಗುವ ಭಾರಿ ಗಾತ್ರದ ತೊರಕೆ ಮೀನಾಗಿದೆ. ಕೆ.ಜಿ.ಗೆ 50 ರಿಂದ ರೂ.100 ಬೆಲೆಗೆ ಮಾರಾಟವಾಗುವ ಈ ಮೀನು, ಅರಬ್ಬಿ ಸಮುದ್ರದಲ್ಲಿ ಆಳ ಸಮುದ್ರದ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಗೆ ಬಿದ್ದಿದೆ.