ಕಡಬ: ಮನೆ ಸಮೀಪ ಕಂಡು ಬಂದ ಹುಲಿ – ಸ್ಥಳೀಯರಲ್ಲಿ ಆತಂಕ – ಅರಣ್ಯಾಧಿಕಾರಿಗಳಿಂದ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.22. ತಾಲೂಕಿನ ಆಲಂಕಾರು ಪರಿಸರದಲ್ಲಿ ಮಂಗಳವಾರದಂದು ಬೆಳಿಗ್ಗೆ ಹುಲಿಯೊಂದು ಕಂಡುಬಂದಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

ಅಲಂಕಾರು ಗ್ರಾಮದ ನೆಕ್ಕಿಲಾಡಿ‌ ಬೈಲು ನೈಯಲ್ಗ ನಿವಾಸಿ ಜನಾರ್ದನ ಬಂಗೇರ ಎಂಬವರ ಮನೆಯ ಸಮೀಪ ಮಂಗಳವಾರ ಬೆಳಿಗ್ಗೆ ಹುಲಿ ಕಂಡುಬಂದಿದ್ದು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ‌ ಜಯಕುಮಾರ್, ಗಸ್ತು ಅರಣ್ಯ ಪಾಲಕ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಕಾಡು ಪ್ರಾಣಿಯ ಹೆಜ್ಜೆ ಗುರುತು ಕಂಡುಬಂದಿದ್ದು, ಚಿರತೆಯ ಹೆಜ್ಜೆ ಗುರುತಾ ಅಥವಾ ಹುಲಿಯ ಹೆಜ್ಜೆ ಗುರುತಾ ಅನ್ನುವುದು ಪರಿಶೀಲನೆಯ ಬಳಿಕ ತಿಳಿದು ಬರಬೇಕಿದೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Also Read  ರಾಮ ಮಂದಿರ ನಿರ್ಮಾಣಕ್ಕೆ ಉಡುಪಿ ಪೇಜಾವರ ಮಠದದಿಂದ 5 ಲಕ್ಷ ರೂ. ದೇಣಿಗೆ

error: Content is protected !!