ಚಿಕ್ಕಮಗಳೂರು ಭಾರೀ ಮಳೆ – ಪ್ರವಾಸ ಮುಂದೂಡುವಂತೆ ಸೂಚನೆ

(ನ್ಯೂಸ್ ಕಡಬ) newskadaba.com ಅ. 22. ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಈ ಭಾಗದ ಪ್ರವಾಸಿ ತಾಣಗಳಿಗೆ ಬರುವ ವಿವಿಧ ಭಾಗಗಳ ಪ್ರವಾಸಿಗರಿಗೆ ಒಂದು ವಾರಗಳ ಕಾಲ ಪ್ರವಾಸ ಮುಂದೂಡುವಂತೆ ಜಿಲ್ಲಾಡಳಿತ ಸೂಚಿಸಿದೆ.


ಜಿಲ್ಲೆಯಲ್ಲಿ ಒಮ್ಮೆ ಬಿಸಿಲು. ಮತ್ತೊಮ್ಮೆ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಒಟ್ಟಾರೆ ಹಿಂಗಾರು ಮಳೆಯ ಅಬ್ಬರಕ್ಕೆ ಕಾಫಿನಾಡಿನ ಜನ ಕಂಗಾಲಾಗಿದ್ದಾರೆ. ಇದರ ನಡುವೆ ಮಳೆ ಅಬ್ಬರಕ್ಕೆ ಮತ್ತೆ ಬೆಟ್ಟ-ಗುಡ್ಡ-ಧರೆ ಕುಸಿಯುವ ಭೀತಿಯಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ಒಂದು ವಾರ ಪ್ರವಾಸ ಮುಂದೂಡುವಂತೆ ಸೂಚಿಸಿದೆ. ಈಗಾಗಲೇ ಜಿಲ್ಲಾದ್ಯಂತ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಮಾಡಿಸಿದ ಸರ್ವೆಯಲ್ಲಿ ಜಿಲ್ಲೆಯ 88 ಸ್ಥಳಗಳನ್ನ ಡೇಂಜರ್ ಸ್ಪಾಟ್ ಎಂದು ಗುರುತಿಸಲಾಗಿದೆ.

error: Content is protected !!
Scroll to Top