ರಾಜ್ಯದ ಎಲ್ಲಾ ಶಾಲೆಗಳಲ್ಲಿ”100 ದಿನಗಳ ಓದುವ ಆಂದೋಲನ” ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com .21 ಬೆಂಗಳೂರು : ನವಂಬರ್‌ 4ರಿಂದ 2025ರ ಫೆಬ್ರವರಿ 11ರವರೆಗೆ ವರೆಗೆ ರಾಜ್ಯದ ಎಲ್ಲಾ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ  “100 ದಿನಗಳ ಓದುವ ಆಂದೋಲನ”  ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ  ಮಹತ್ವದ ಆದೇಶ ಹೊರಡಿಸಿದೆ.

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರೊಂದಿಗೆ ಭಾಷಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸಬೇಕಿದೆ. ಹಾಗಾಗಿ 100 ದಿನಗಳ ಓದುವ ಆಂದೋಲನವನ್ನು ರಾಜ್ಯವ್ಯಾಪಿ ಎಲ್ಲಾ ಬಾಲವಾಟಿಕ/ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ 01 ರಿಂದ 08ನೇ ತರಗತಿಯ ವಿದ್ಯಾರ್ಥಿಗಳಿಗೆ ಅನ್ವಯಿಸುವಂತೆ 3 ಗುಂಪುಗಳಲ್ಲಿ ಅನುಷ್ಠಾನಗೊಳಿಸಲು 2023-24ನೇ ಸಾಲಿನ PAB Plan Document ನಲ್ಲಿ ಯೋಜಿಸಲಾಗಿದೆ.

Also Read  ➤ ವಿಧಾನಸಭಾ ಚುನಾವಣೆ➤ ಸಮೀಕ್ಷೆ ಆಧರಿಸಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

NIPUN ಭಾರತ ಮಿಷನ್‌ನ ಆಶಯದಂತೆ FLN ಚಟುವಟಿಕೆಗಳನ್ನು ನಿರ್ವಹಿಸುವುದರ ಮೂಲಕ ಮಕ್ಕಳಲ್ಲಿ ಓದುವ, ಬರೆಯುವ ಹಾಗೂ ಅರ್ಥೈಸಿಕೊಳ್ಳುವ ಹಾಗೂ ಸಂತೋಷದಿಂದ ಭಾಷಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕಾಗಿದೆ.ಓದುವ ಆಂದೋಲನದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉಲ್ಲೇಖದಲ್ಲಿ ಯೋಜಿಸಿರುವಂತೆ ಕೈಗೊಳ್ಳಬೇಕಾಗಿರುವ ಕಾರ್ಯ ಚಟುವಟಿಕೆಗಳ ವಿವರಗಳನ್ನೊಳಗೊಂಡ ವೇಳಾಪಟ್ಟಿಯನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಂಬಂಧ ಸವಿವರ ಮಾರ್ಗಸೂಚಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿದ್ದು, ಶಾಲಾ ಶಿಕ್ಷಕರು ಅದರಂತೆ ವ್ಯವಸ್ಥಿತವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದೆ.

error: Content is protected !!
Scroll to Top