ಕೆಎಂಎಫ್ ನಿಂದ ಗ್ರಾಹಕರಿಗೆ ಗುಡ್ ನ್ಯೂಸ್; ಶೀಘ್ರವೇ ನಂದಿನಿ ಇಡ್ಲಿ ದೋಸೆ ಹಿಟ್ಟು ಮಾರುಕಟ್ಟೆಗೆ

(ನ್ಯೂಸ್ ಕಡಬ) newskadaba.com .21 ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ರುಚಿಯನ್ನು ನೀವು ಸವಿದೆ ಇರುತ್ತೀರಾ. ಕೇವಲ ಹಾಲು ಮೊಸರು ಮಾತ್ರವಲ್ಲದೇ 100ಕ್ಕೂ ಹೆಚ್ಚು ಉತ್ಪನ್ನಗಳನ್ನು ನಮ್ಮ ಹೆಮ್ಮೆಯ ನಂದಿನಿ ನೀಡುತ್ತಾ ಬಂದಿದೆ.

ಈ ಹಾಲು ಮಹಾಮಂಡಲವು ಹೊಸದೊಂದು ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದೆ. ಅದ್ಯಾವುದೆಂದರೆ ನಂದಿನಿ ಬ್ರಾಂಡ್ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರಿಗರಿಗೆ ಪರಿಚಯಿಸಲು ಸಜ್ಜಾಗಿದೆ. ಈ ಸದ್ಯವೇ ಬೆಂಗಳೂರು ಮಾರುಕಟ್ಟೆಗೆ ಈ ಉತ್ಪನ್ನವು ಲಗ್ಗೆ ಇಡಲಿದೆ.

ಮನಿಕಂಟ್ರೋಲ್ ವರದಿಯ ಪ್ರಕಾರ:

ಹಿಟ್ಟು 450 ಗ್ರಾಂ ಹಾಗೂ 900 ಗ್ರಾಂ ಪ್ಯಾಕ್ ಗಳಲ್ಲಿ ದೊರೆಯಲಿದೆ.  ಅದರ ಹಾಲೊಡಕು ಪ್ರೋಟಿನ್ ಬೇಸ್ ಗಿಂತ ವಿಶಿಷ್ಟವಾಗಿರಲಿದೆ. ಇದು ರುಚ್ಚಿ ಮತ್ತು ವಿನ್ಯಾಸ ಎರಡನ್ನೂ ಹೆಚ್ಚಿಸಲಿದೆ ಎಂದು ಕೆಎಂಎಫ್ ನೀಡಿರುವ ಭರವಸೆಯಾಗಿದೆ.  ಶೀಘ್ರವೇ ಬೆಲೆ ನಿಗದಿಪಡಿಸಲಾಗುವುದು. ಮುಖ್ಯಮಂತ್ರಿಯವರು ಸಮಯ ನೀಡಿದ ಬಳಿಕ ಉತ್ಪನ್ನಗಳ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗುವುದು ಎನ್ನಲಾಗಿದೆ. ಬೆಂಗಳೂರಿನ ನಂತರದಲ್ಲಿ ಎರಡನೇ ಹಂತದಲ್ಲಿ ರಾಜ್ಯಾದ್ಯಂತ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರಾಟವನ್ನು ವಿಸ್ತರಿಸಲಾಗುವುದು ಎಂದು ಕೆಎಂಎಫ್  ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್ ಹೇಳಿದ್ದಾರೆ.

Also Read  ಆಗಸ್ಟ್ 23 ರಂದು ನಿವೃತ್ತ ಸರಕಾರಿ ನೌಕರರ ಪಿಂಚಣಿ ಅದಾಲತ್

error: Content is protected !!
Scroll to Top