ನೂಜಿಬಾಳ್ತಿಲ ಕುಬುಲಾಡಿ ರಸ್ತೆಯ ಕಳಪೆ ಕಾಮಗಾರಿ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ► ಮರು ಡಾಮರೀಕರಣಗೊಳಿಸಿದ ಪಿಡಬ್ಲ್ಯೂಡಿ ಇಲಾಖೆ

(ನ್ಯೂಸ್ ಕಡಬ) newskadaba.com ಕಡಬ, ಮಾ.18. ನೂಜಿಬಾಳ್ತಿಲ ಗ್ರಾಮದ ಕುಬಲಾಡಿ ದಲಿತ ಕಾಲೋನಿಯಲ್ಲಿ 2017-18ನೇ ಸಾಲಿನಲ್ಲಿ ಮಾಡಿದ ರಸ್ತೆ ಡಾಮರೀಕರಣವು ಸಂಪೂರ್ಣ ಕೆಟ್ಟುಹೋಗಿದ್ದು ಕಳಪೆ ಕಾಮಗಾರಿ ಎಂದು ಕಾಲೋನಿ ನಿವಾಸಿಗಳು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯು ರಸ್ತೆಯನ್ನು ಮರು ಡಾಮರೀಕರಣಗೊಳಿಸಿದ ಘಟನೆ ಶನಿವಾರದಂದು ನಡೆದಿದೆ.

ಕಳೆದ ಮಾ.01 ರಂದು ದಲಿತ ಸಂಘರ್ಷ ಸಮಿತಿ ಕಡಬ ತಾಲೂಕು ಸಂಚಾಲಕ ವಸಂತ ಕುಬಲಾಡಿಯವರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿ ಪತ್ರಿಕಾಗೋಷ್ಟಿ ಕರೆದಿದ್ದರು. ಈ ಬಗ್ಗೆ ಗಮನ ಹರಿಸಿದ ಪಿಡಬ್ಲ್ಯುಡಿ ಇಲಾಖೆಯು ಕುಬಲಾಡಿ ದಲಿತ ಕಾಲೋನಿ ಮರು ಡಾಮರೀಕರಣಗೊಳಿಸಿ ಸಂಪೂರ್ಣ ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ಯೋಗ್ಯ ರಸ್ತೆಯನ್ನಾಗಿಸಿದೆ. ಈ ನಿಟ್ಟಿನಲ್ಲಿ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಕಡಬ ತಾ.ಸಂಚಾಲಕ ವಸಂತ ಕುಬಲಾಡಿಯವರು ತಿಳಿಸಿದ್ದಾರೆ.

Also Read  ಬೆಳ್ತಂಗಡಿ: ಫಾಲ್ಸ್ ಗೆ ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು

error: Content is protected !!
Scroll to Top