ಮಾವಿನ ಎಲೆಯಿಂದ ಎಷ್ಟೆಲ್ಲಾ ಉಪಯೋಗ… ಕೇಳಿದ್ರೆ ಶಾಕ್ ಆಗ್ತೀರಾ..!!

(ನ್ಯೂಸ್ ಕಡಬ) newskadaba.com. 21. ಮಾವಿನಹಣ್ಣು, ಮಾವಿನಕಾಯಿ ದೇಹಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನ ಎಲೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಮಾವಿನೆಲೆಯಲ್ಲಿ ಆ್ಯಂಟಿ ಆಂಕ್ಸಿಡೆಂಟ್ ಹೇರಳವಾಗಿರುತ್ತದೆ. ಹಾಗಯೇ ಅದರಲ್ಲಿ ವಿಟಮಿನ್ ಸಿ ಕೂಡಾ ಇರುತ್ತದೆ. ಮಾವಿನ ಎಲೆಯ ಟೀ ಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಸಿ ಅಂಶ ಸಿಗುತ್ತದೆ. ವಿಟಮಿನ್ ಸಿ ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮಾವಿನ ಎಲೆಯು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಕೆಲಸದ ಒತ್ತಡ, ಯಾವುದೋ ತಲೆಬಿಸಿಯಿಂದ ಕಿರಿಕಿರಿ ಅನುಭವಿಸುತ್ತಿದ್ದರೆ 2 ಹಿಡಿ ಮಾವಿನೆಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕಿ. ಈ ನೀರಿನಿಂದ ಸ್ನಾನ ಮಾಡಿ. ಇದು ಮನಸ್ಸು, ದೇಹವನ್ನು ಉಲ್ಲಾಸಗೊಳಿಸುತ್ತದೆ. 10 ಮಾವಿನ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಕ್ಲೀನ್ ಮಾಡಿ. ಇದನ್ನು 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ. ಇಡೀ ರಾತ್ರಿ ಇದನ್ನು ಹಾಗೆಯೇ ಬಿಡಿ. ಬೆಳಗ್ಗೆ ಎಲೆಗಳನ್ನು ತೆಗೆದು ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಬಿಕ್ಕಳಿಕೆ ಹಾಗೂ ಗಂಟಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಮಾವಿನ ಎಲೆ ಒಂದು ಅದ್ಭುತ ಮನೆಮದ್ದು. ಸ್ವಲ್ಪ ಮಾವಿನ ಎಲೆಯನ್ನು ಸುಟ್ಟು ಅದರ ಹೊಗೆಯನ್ನು ಮೂಗಿಗೆ ಎಳೆದುಕೊಳ್ಳಿ. ಇದರಿಂದ ಬಿಕ್ಕಳಿಗೆ ಕಡಿಮೆಯಾಗುತ್ತದೆ ಹಾಗೂ ಗಂಟಲಿನ ಸಮಸ್ಯೆ ನಿವಾರಣೆಯಾಗುತ್ತದೆ.

error: Content is protected !!

Join the Group

Join WhatsApp Group