ಲಾರಿ- ಬೈಕ್ ಡಿಕ್ಕಿ: ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ರಾಯಚೂರು, . 21. ಲಾರಿ-ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಯರಗೇರಾದ ಮಂತ್ರಾಲಯ ರಸ್ತೆಯ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಆಂಧ್ರಪ್ರದೇಶದ ಮಾಧವರಂನ ಮದನಪಲ್ಲಿ ಗ್ರಾಮದ ರೆಡ್ಡಿ(37) ಎಂದು ಗುರುತಿಸಲಾಗಿದೆ. ಬೈಕ್ ಸವಾರ ರಾಯಚೂರಿನಿಂದ ಮಾಧವರಂಗೆ ತೆರಳುತ್ತಿದ್ದ. ಈ ವೇಳೆ ಆಂಧ್ರಪ್ರದೇಶದಿಂದ ರಾಯಚೂರು ಕಡೆಗೆ ಬರುತ್ತಿದ್ದ ಲಾರಿಯು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Also Read  ಸಹೋದ್ಯೋಗಿಯ ಮೇಲೆಯೇ ಅತ್ಯಾಚಾರಗೈದ ಪೊಲೀಸ್...!

 

error: Content is protected !!
Scroll to Top