ಎಸ್ಎಸ್ಎಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ ಪ್ರೌಢ ಸಮಾಪ್ತಿ- ಸತತ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಪಾಟ್ರಕೋಡಿ ಯುನಿಟ್..!

(ನ್ಯೂಸ್ ಕಡಬ) newskadaba.com ಅ.21. ಕರ್ನಾಟಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ -2024 ಕಾರ್ಯಕ್ರಮವು ಸೂರಿಕುಮೇರು ಆಟದ ಮೈದಾನದಲ್ಲಿ ಭಾನುವಾರದಂದು ಅದ್ದೂರಿಯಾಗಿ ನಡೆಯಿತು.

ಪಾಟ್ರಕೋಡಿ ಯುನಿಟ್ ಅತ್ಯಧಿಕ ಅಂಕಗಳೊಂದಗೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ಸೂರಿಕುಮೇರು ಯುನಿಟ್ ಪಡೆಯಿತು. ದಾರುಲ್ ಇರ್ಶಾದ್ ಶಿಲ್ಪಿ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಕೆ.ಪಿ.ಸಾಬಿತ್ ಪಾಟ್ರಕೋಡಿರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೂರಿಕುಮೇರು ಖತೀಬರಾದ ಹಸೈನಾರ್ ಸ‌ಅದಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಳಿಕ ನಡೆದ ಮಾಣಿ ಸೆಕ್ಟರ್ ವ್ಯಾಪ್ತಿಯಲ್ಲಿ ಬರುವ ಆರು ಯುನಿಟ್ ಗಳಿಂದ ಸುಮಾರು ಇನ್ನೂರಕ್ಕೂ ವಿಧ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸೆಕ್ಟರ್ ಸಾಹಿತ್ಯೋತ್ಸವದ ಚೇರ್ಮನ್ ಹನೀಫ್ ಸಂಕ ಅಧ್ಯಕ್ಷತೆ ವಹಿಸಿದರು. ಎಸ್‌ವೈಎಸ್ ನಾಯಕರಾದ ಬಶೀರ್ ಝುಹ್ರಿ ಉದ್ಘಾಟಿಸಿದರು. ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಆಳ್ವ ಕೊಡಾಜೆ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಕರ್ನಾಟಕ ಮುಸ್ಲಿಂ ಜಮಾಅತ್ ಮಾಣಿ ಸರ್ಕಲ್ ಅಧ್ಯಕ್ಷರಾದ ಇಬ್ರಾಹಿಂ ಸ‌ಅದಿ ಮಾಣಿ, ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ನಾಯಕರಾದ ಸಲಾಂ ಹನೀಫಿ ಕಬಕ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ, ಬಡವರ ಪಾಲಿನ ಆಶಾಕಿರಣ ಆರ್ ಆರ್ ಸ್ಕ್ರಾಪ್ ಮಾಲಕರಾದ ಇಸ್ಮಾಯಿಲ್ ಸೂರಿಕುಮೇರುರವರನ್ನು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಅತಿಥಿ ಹಾಗೂ ಸಾಧಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Also Read  ಕುಡಿತದ ಮತ್ತಿನಲ್ಲಿ ಜಗಳ ನಡೆದು ಮಗನನ್ನೇ ಕೊಂದ ತಂದೆ...! ➤ ಆರೋಪಿ ಅರೆಸ್ಟ್

ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ಮುಹಮ್ಮದ್ ಹಾಜಿ ಬಂಡಾಡಿ, ಬದ್ರಿಯಾ ಜುಮಾ ಮಸ್ಜಿದ್ ಸೂರಿಕುಮೇರು ಇದರ ಅಧ್ಯಕ್ಷರಾದ ಹಾಜಿ ಅಬ್ದುಲ್‌ ಹಮೀದ್, ಪ್ರಧಾನ ಕಾರ್ಯದರ್ಶಿ ಅಮೀರುದ್ದೀನ್, ಮದರಸ ಮುಖ್ಯ ಶಿಕ್ಷಕರಾದ ಮುಹಮ್ಮದ್ ನಾಸೀರ್ ಸ‌ಅದಿ ನೇರಳಕಟ್ಟೆ, ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಾದ ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಕಾಸಿಂ ಹಾಜಿ ಮಿತ್ತೂರು, ಯೂಸುಫ್ ಹಾಜಿ ಸೂರಿಕುಮೇರು, ಎಸ್ ಆರ್ ಸುಲೈಮಾನ್ ಸೂರಿಕುಮೇರು, ಇಬ್ರಾಹಿಂ ಹಾಜಿ ಶೇರಾ, ಅಬ್ದುಲ್‌ ಖಾದರ್ ಹಾಜಿ ಶೇರಾ, ಕಾಸಿಂ ಪಾಟ್ರಕೋಡಿ, ಅಬ್ದುಲ್‌ ಕರೀಂ ನೆಲ್ಲಿ ಮುಹಮ್ಮದ್ ಹಬೀಬ್ ಶೇರಾ, ಅಬ್ಬಾಸ್ ಪರ್ಲೋಟ್ಟು, ಹಂಝ ಕಾಯರಡ್ಕ, ಅಶ್ರಫ್ ಸಖಾಫಿ ಸೂರಿಕುಮೇರು, ಎಸ್‌ವೈಎಸ್ ನಾಯಕರಾದ ಹೈದರ್ ಸಖಾಫಿ ಬುಡೋಳಿ, ಅಬ್ದುಲ್‌ ಜಲೀಲ್ ಮುಸ್ಲಿಯಾರ್ ಕೊಡಾಜೆ, ಉಮರುಲ್ ಫಾರೂಕ್ ಹನೀಫಿ ಪರ್ಲೋಟು,ಇಮ್ರಾನ್ ಸೂರಿಕುಮೇರು, ನಝೀರ್ ಪಾಟ್ರಕೋಡಿ, ಮುಸ್ತಫಾ ಬುಡೋಳಿ, ಇಬ್ರಾಹಿಂ ಮುಸ್ಲಿಯಾರ್ ಹಳೀರಾ, ಅಬ್ದುಲ್‌ ಅಝೀಝ್ ಪಾಟ್ರಕೋಡಿ, ಹಸೈನಾರ್ ಸಂಕ, ಹಸೈನಾರ್ ಟೈಲರ್, ಉಮರುಲ್ ಫಾರೂಖ್ ಬದ್ರಿಯಾ ಗ್ರೌಂಡ್, ಅಬ್ದುಲ್‌ ಅಝೀಂ ನೆಲ್ಲಿ, ಖಲಂದರ್ ಪಾಟ್ರಕೋಡಿ, ದಾವೂದ್ ಕಲ್ಲಡ್ಕ ಮೊದಲಾದವರು ಭಾಗವಹಿಸಿದ್ದರು. ತೀರ್ಪುಗಾರರಾಗಿ ಅಬ್ದುರ್ರಹ್ಮಾನ್ ಪದ್ಮುಂಜ, ಉಮ್ಮರ್ ಮಾಸ್ಟರ್ ಕುಪ್ಪೆಟ್ಟಿ, ಅಲಿ ಮುಈನಿ ಕೊಡಗು, ನೌಶಾದ್ ಉರುವಾಲ್‌ ಪದವು, ಗರ್ಲ್ಸ್ ವಿಭಾಗದ ಜಡ್ಜ್ ಆಗಿ, ಶಿಕ್ಷಕಿ ಆಯಿಶಾ, ರಶೀದಾ ಉಪ್ಪಿನಂಗಡಿ, ಮೊದಲಾದವರು ಕಾರ್ಯ ನಿರ್ವಹಿಸಿದರು. ಸೂರಿಕುಮೇರು ಸಾಹಿತ್ಯ ಸಮಿತಿ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಊಟೋಪಹಾರ ನೀಡಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಪುತ್ತೂರುರವರು ಸ್ವಾಗತಿಸಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಸ‌ಅದಿ ಧನ್ಯವಾದಗೈದರು. ಅಡ್ವಕೇಟ್ ಗಝ್ಝಾಲಿ ಕುಡ್ತಮೊಗರು ಹಾಗೂ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top