ಕೆರೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Death, deadbody, Waterfall

(ನ್ಯೂಸ್ ಕಡಬ) newskadaba.com ಮಂಡ್ಯ, . 21. ಮದ್ದೂರು ತಾಲೂಕಿನ ದೇಶಹಳ್ಳಿ (ಮದ್ದೂರು) ಕೆರೆಯಲ್ಲಿ ಈಜುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.

ಮೃತಪಟ್ಟ ಬಾಲಕರನ್ನು ಮದ್ದೂರು ತಾಲೂಕಿನ ಶಂಕರಪುರ ಗ್ರಾಮದ ಸೋಮು ಅವರ ಪುತ್ರ ಮುತ್ತುರಾಜು(14) ಮತ್ತು ತೇಜಸ್ ಅವರ ಪುತ್ರ ರಂಜು(17) ಎಂದು ಗುರುತಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತ ಯುವಕ ಮುತ್ತು ರಾಜು ಎಸೆಸ್ಸಲ್ಸಿ ವ್ಯಾಸಂಗ ಮಾಡುತ್ತಿದ್ದು, ರಂಜು ಸೋಮನಹಳ್ಳಿಯ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಿಪಿಎಲ್, ಅಂತ್ಯೋದಯಕ್ಕೆ ಇನ್ನು ನೇರ ನಗದು ಇಲ್ಲ, ಬದಲಿಗೆ ಆಹಾರ ಕಿಟ್

 

error: Content is protected !!
Scroll to Top