ಸೀಮೆಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ ► ಬಿಟ್ಟಿ ಸೀಮೆಎಣ್ಣೆಗಾಗಿ ಬಕೆಟ್, ಕ್ಯಾನ್ ಹಿಡಿದು ಮುಗಿ ಬಿದ್ದ ಜನತೆ

(ನ್ಯೂಸ್ ಕಡಬ) newskadaba.com ಹಾಸನ, ಮಾ.18. ಸೀಮೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದುದರಿಂದ ರಸ್ತೆಯಲ್ಲಿ ಚೆಲ್ಲುತ್ತಿದ್ಧ ಸೀಮೆಎಣ್ಣೆಯನ್ನು ತುಂಬಿಸಿಕೊಳ್ಳಲು ಸಾರ್ವಜನಿಕರು ಹರಸಾಹಸಪಟ್ಟ ಘಟನೆ ಶನಿವಾರದಂದು ಹಾಸನದ ಅರಕಲಗೂಡು ಎಂಬಲ್ಲಿ ನಡೆದಿದೆ.

ಪಡಿತರ ಅಂಗಡಿಗಳಿಗೆ ಸೀಮೆಎಣ್ಣೆ ಪೂರೈಸಲು ತೆರಳುತ್ತಿದ್ದ ಟ್ಯಾಂಕರ್‍ ಅರಕಲಗೂಡಿನ ಯಗಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ಟ್ಯಾಂಕರ್ ನಿಂದ ಹೊರ ಬರುತ್ತಿದ್ದ ಸೀಮೆಎಣ್ಣೆಯನ್ನು ಪಡೆಯಲು ಜನರು ಪಾತ್ರೆ, ಜಗ್ಗು, ಕ್ಯಾನ್, ಚೊಬ್ಬುಗಳಲ್ಲಿ ತುಂಬಿಕೊಂಡು ಬರುತ್ತಿದ್ದ ದೃಶ್ಯ ಕಂಡುಬಂದಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅರಕಲಗೂಡು ಠಾಣಾ ಪೋಲಿಸರು ಭೇಟಿ ನೀಡಿ ಸ್ಥಳದಲ್ಲಿದ್ದ ಜನರನ್ನು ಚದುರಿಸಲು ಹರಸಾಹಸಪಟ್ಟರು ಎನ್ನಲಾಗಿದೆ.

Also Read  ಸವಣೂರು-ಮಾಡಾವು ರಸ್ತೆ ಕಾಮಗಾರಿ ಹಿನ್ನೆಲೆ ➤‌ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಮನವಿ

error: Content is protected !!
Scroll to Top