(ನ್ಯೂಸ್ ಕಡಬ) newskadaba.com ಅ.21 ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆಗಳಲ್ಲಿ ತಡೆಗೋಡೆಯಾಗಿ ನಿಂತಿರುವ ತಮಿಳುನಾಡು ಕ್ಯಾತೆ ಮುಂದುವರೆದಿರುವಂತೆಯೇ ಇತ್ತ ಕರ್ನಾಟಕ ತನ್ನ ಹಕ್ಕುಗಳನ್ನು ಸಾಧಿಸಿಕೊಳ್ಳುವಲ್ಲಿ ತಮಿಳು ಪ್ರಜೆಗಳು ರಾಜ್ಯದ ಬೆನ್ನಿಗೆ ನಿಂತಿದ್ದಾರೆ.
ಕರ್ನಾಟಕದ ಹಕ್ಕುಗಳನ್ನು ವಿಶೇಷವಾಗಿ ಭಾಷೆ, ನೆಲ, ಜಲ, ಗಡಿ, ಇತರ ವಿಷಯಗಳ ರಕ್ಷಣೆಯಲ್ಲಿ ಕರ್ನಾಟಕ ಸರ್ಕಾರವನ್ನು ಬೆಂಬಲಿಸುವುದು ಸೇರಿದಂತೆ ಒಟ್ಟು 35 ನಿರ್ಣಯಗಳನ್ನು ಕನ್ನಡಿಗರು ಮತ್ತು ತಮಿಳರ ಏಕತೆಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿದೆ.ಪ್ರಮುಖವಾಗಿ ಕಾವೇರಿ ಮತ್ತು ಮಹದಾಯಿ ನೀರು ಹಂಚಿಕೆ, ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಮತ್ತು ಬೆಳಗಾವಿ ಗಡಿ ಸಮಸ್ಯೆಯಂತಹ ವಿಷಯಗಳಲ್ಲಿ ಕರ್ನಾಟಕದ ಹಕ್ಕುಗಳನ್ನು ಬೆಂಬಲಿಸುವ ನಿರ್ಧಾರವನ್ನು ಅವರು ತೆಗೆದುಕೊಂಡರು.