ನಿಗೂಢ ಕಾಯಿಲೆಗೆ ಒಂದೇ ತಿಂಗಳಲ್ಲಿ 17 ಮಕ್ಕಳು ಬಲಿ..!

(ನ್ಯೂಸ್ ಕಡಬ) newskadaba.com ಜೈಪುರ, . 21. ನಿಗೂಢ ಕಾಯಿಲೆಯಿಂದ ಭಾನುವಾರ ಎರಡು ವರ್ಷದ ಗಂಡುಮಗು ಮೃತಪಟ್ಟಿದ್ದು, ಕಳೆದ 30 ದಿನಗಳಲ್ಲಿ ರಾಜಸ್ಥಾನದ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಕೋಟ್ರಾ ಮತ್ತು ಉದಯಪುರ ಜಿಲ್ಲೆಗಳಲ್ಲಿ ಈ ಕಾಯಿಲೆಗೆ ಬಲಿಯಾದ ಮಕ್ಕಳ ಸಂಖ್ಯೆ 17ಕ್ಕೇರಿದೆ.

ಜ್ವರ, ಶೀತ ಮತ್ತು ಕಫದಿಂದ ಬಳಲುತ್ತಿದ್ದ ಎರಡು ವರ್ಷದ ಮಗು ರೋಗ ಲಕ್ಷಣ ಕಾಣಿಸಿಕೊಂಡ ಎರಡು ಮೂರು ದಿನಗಳಲ್ಲೇ ಕೊನೆಯುಸಿರೆಳೆದಿದೆ. ಇದು ಗ್ರಾಮದಲ್ಲಿ ಕಳೆದ 30 ದಿನಗಳಿಂದಲೂ ಆಗುತ್ತಿದೆ. ಈ ಗ್ರಾಮದಲ್ಲಿ 17 ಮಕ್ಕಳು ಮೃತಪಟ್ಟಿವೆ. ಅಸ್ವಸ್ಥತೆ ಕಾಣಿಸಿಕೊಂಡ ನಾಲ್ಕು ದಿನಗಳ ಒಳಗಾಗಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಘಾಟಾ ಪಂಚಾಯತ್ ಸರಪಂಚ್ ನಿಕಾರಾಂ ಗರಾಸಿಯಾ ಹೇಳಿದ್ದಾರೆ. ಈ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಆ ಬಳಿಕ ಉನ್ನತ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

Also Read  ವಯೋವೃದ್ಧೆಯ ಮೇಲೆ ಹಿಂಸಾತ್ಮಕ ವರ್ತನೆ ➤ ವೀಡಿಯೋ ವೈರಲ್ ಆರೋಪಿಗಳ ಬಂಧನ

 

error: Content is protected !!
Scroll to Top