ಪಂಜ: ಜೇಸಿ ಸಪ್ತಾಹ -2024; ಚಿತ್ರಕಲೆ ಮತ್ತು ಕೇರಂ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

(ನ್ಯೂಸ್ ಕಡಬ) newskadaba.com ಅ. 21. ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹದ ಅಂಗವಾಗಿ ನಡೆದ ಚಿತ್ರಕಲಾ ಮತ್ತು ಕೇರಂ ಸ್ಪರ್ಧೆ‌ಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಖಂಡಿಗ ಹಾಗೂ ಕೌಶಿಕ್ ಕುಳ ಬಹುಮಾನ ವಿತರಣೆ ಮಾಡಿದರು. ಸಪ್ತಾಹ ನಿರ್ದೇಶಕ ವಾಚಣ್ಣ ಕೆರೆಮೂಲೆ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತೀಶ್ ಪಂಜ ಚಿತ್ರಕಲಾ ಸ್ಪರ್ಧೆ ನಿರ್ವಹಣೆಗೆ ಸಹಕರಿಸಿದರು.

ಚಿತ್ರಕಲಾ ಸ್ಪರ್ಧೆ ಫಲಿತಾಂಶ: ಎಲ್ ಕೆ ಜಿ, ಯುಕೆಜಿ ಮತ್ತು 1ನೇ ತರಗತಿ ವಿಭಾಗ: 1. ನಿರ್ವಿ ಜಿ ಎಂ 1ನೇ ತರಗತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳ್ಪ , 2. ನಿಧಿ ಕೈರಂಗಳ 1ನೇ ತರಗತಿ ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕ, 3. ಅನಿಸಿಕಾ 1ನೇ ತರಗತಿ ಶ್ರೀ ಗೋಪಾಲಕೃಷ್ಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ, ಬೆಳ್ತಂಗಡಿ, 4. ಇಶಾನಿ ಎಸ್. ಯುಕೆಜಿ ಸೈಂಟ್ ಆನ್ಸ್ ಸ್ಕೂಲ್ ಕಡಬ, 5. ಕನಿಷ್ಕಾ 1ನೇ ತರಗತಿ ಸೈಂಟ್ ಆನ್ಸ್ ಸ್ಕೂಲ್ ಕಡಬ.

Also Read  ಗುರುಪುರ ಅಡ್ಡೂರು ಸೇತುವೆ: ಸಂಚಾರ ಮಾರ್ಗದಲ್ಲಿ ಬದಲಾವಣೆ

2ರಿಂದ 4ನೇ ತರಗತಿ ವಿಭಾಗ:– 1. ರೋಹಿಣಿ.ಕೆ 3ನೇ ತರಗತಿ ಬ್ಲೆಸ್ಡ್ ಕುರಿಯಾಕೋಸ್ ಗುತ್ತಿಗಾರು, 2. ನಿಹಾಲ್ ಕೆ ವಿ ಮಾರುತಿ ಇಂಟರ್ನ್ಯಾಷನಲ್ ಸ್ಕೂಲ್ ಗೂನಡ್ಕ, 3. ನಯೋನಿಕಾ ಬಿ .ಸಿ 3ನೇ ತರಗತಿ ಸೈಂಟ್ ಆನ್ಸ್ ಸ್ಕೂಲ್ ಕಡಬ, 4. ಅನಿಸಿಕಾ 4ನೇ ತರಗತಿ ರೋಟರಿ ಸ್ಕೂಲ್, ಸುಳ್ಯ 5. ವೈಭವ್ 2ನೇ ತರಗತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ.

5ರಿಂದ 7ನೇ ತರಗತಿ ವಿಭಾಗ: 1. ಪ್ರಾಪ್ತಿ ಎನ್ ಎಸ್ 5ನೇ ತರಗತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ, 2. ನಿನಾದ್ ಕೈರಂಗಳ 7ನೇ ತರಗತಿ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ,3. ಅನ್ವಿತಾ ಶೆಟ್ಟಿ 5ನೇ ತರಗತಿ ಸೈಂಟ್ ಆನ್ಸ್ ಕಡಬ, 4. ವಿದ್ಯಾ ಕೆ. 5ನೇ ತರಗತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಂಜ, 5. ಕುಶಿತ್ ಮಲ್ಲಾರ 6ನೇ ತರಗತಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ.

8ರಿಂದ 10ನೇ ತರಗತಿ ವಿಭಾಗ: 1. ಅನ್ವಿತ್ ಹರೀಶ್ 10ನೇ ತರಗತಿ ಕೆನರಾ ಹೈಸ್ಕೂಲ್ ಉರ್ವ ಮಂಗಳೂರು, 2. ಕೌಶಿಕ್ 10ನೇ ತರಗತಿ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ , 3. ಸುಕನ್ಯಾ 10ನೇ ತರಗತಿ ಹೋಲಿ ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಂಟ್ವಾಳ, 4. ಭೂಮಿಕ ಕೆ.ವಿ ಹತ್ತನೇ ತರಗತಿ ರೋಟರಿ ಸ್ಕೂಲ್ ಸುಳ್ಯ , 5. ಜಸ್ವಿತ್ ತೋಟ 10ನೇ ತರಗತಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ.

Also Read  ಯಶಸ್ವಿ 'ಆಪರೇಷನ್ ಚೀತಾ' ಕಾರ್ಯಾಚರಣೆಗೆ ಊರವರ ಸಾಥ್ ➤ ಬಾವಿಯಿಂದ ಬೋನಿಗೆ ಬಿದ್ದ ಚಿರತೆ

ಸಾರ್ವಜನಿಕ ವಿಭಾಗ: 1. ಅನಿಲ್ ಕೆ.ವಿ ಬಲ್ಯ, 2. ನೇಹಾ ಬಾಲಾಡಿ ಏನೆಕಲ್ಲು, 3. ಪೃಥ್ವಿನ್ ಎ.ಕೆ ಸುಬ್ರಹ್ಮಣ್ಯ, 4. ಮನಸ್ವಿ ಯು.ಬಿ ಸುಳ್ಯ, 5. ಶಿಲ್ಪಾ ಎಂ ಪೆರಾಬೆ ಕುಂತೂರು.

ಮುಕ್ತ ಕ್ಯಾರಂ ಸ್ಪರ್ಧೆ ವಿಜೇತರು: ಜೀವನ್ ಪ್ರಥಮ ಮತ್ತು ನವೀನ್ (ಪ್ರಥಮ), ಭಾಸ್ಕರ್ ಮತ್ತು ಸದಾನಂದ (ದ್ವಿತೀಯ) ಸ್ಥಾನ ಪಡೆದಿದ್ದಾರೆ.

error: Content is protected !!
Scroll to Top