ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಮಂಗಳೂರು, . 21. ವಿಶೇಷ ಆರ್ಥಿಕ ವಲಯದಲ್ಲಿರುವ ಎಂಆರ್‌ಪಿಎಲ್ ಅಧೀನ ಸಂಸ್ಥೆ ಒಎಂಪಿಎಲ್ ಕಂಪೆನಿಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಶನಿವಾರ ಒಎಂಪಿಎಲ್ ನ ಒಡಿಸಿ ಗೇಟ್‌ ಬಳಿ ಪತ್ತೆಯಾಗಿದೆ.

ಮೃತ ಯುವಕನನ್ನು ಅಸ್ಸಾಂ ಮೂಲದ ಶಮಾನ್ ಅಲಿ (26) ಎಂದು ಗುರುತಿಸಲಾಗಿದೆ. ಒಎಂಪಿಎಲ್ ಸುಮಾರು 15 ಅಡಿ ಎತ್ತರದ ಕಾಂಪೌಂಡ್‌ ಹಾರಿ ಸುಮಾರು 300-400 ಮೀಟರ್‌ ದೂರಕ್ಕೆ ನಡೆದು ಬಂದು ಬಳಿಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ತದನಂತರ ಆತ ನಾಪತ್ತೆಯಾಗಿದ್ದು, ಶವವಾಗಿ ಪತ್ತೆಯಾಗಿದ್ದಾನೆ. ಈ ಸಂಬಂಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  8 ಕಿರು ಅಣೆಕಟ್ಟು ಕಾಮಗಾರಿ ಪ್ರಗತಿಯಲ್ಲಿ

 

 

error: Content is protected !!
Scroll to Top