(ನ್ಯೂಸ್ ಕಡಬ) newskadaba.com ಅ.21 ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಿಸುವ ಸಂಬಂಧ ಆಹ್ವಾನಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಅವಧಿಯನ್ನು ಅ. 28ರವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ವಿಸ್ತರಿಸಿದೆ. ಎಷ್ಟು ದರ ಏರಿಕೆ ಮಾಡಬೇಕೆಂದು ಈ ಕುರಿತು ರಚಿಸಿರುವ ಸಮಿತಿಗೆ ಸಾರ್ವಜನಿಕರು ಅಭಿಪ್ರಾಯ, ಸಲಹೆ ನೀಡಬಹುದಾಗಿದೆ. ಹಾಲಿ ನಮ್ಮ ಮೆಟ್ರೋ ಟಿಕೆಟ್ ಕನಿಷ್ಠ ದರ ₹10 ನಿಂದ ಗರಿಷ್ಠ ದರ ₹60 ವರೆಗಿದೆ.
ಈಗ ಶೇ.15 ರಿಂದ ಶೇ.20 ರಷ್ಟು ಟಿಕೆಟ್ ದರ ಏರಿಕೆ ಆಗುವ ಸಾಧ್ಯತೆಯಿದೆ. ಬಹುತೇಕ ಮುಂದಿನ ತಿಂಗಳಿಂದ ಹೊಸ ದರ ಜಾರಿ ಮಾಡುವ ಸಿದ್ಧತೆಯನ್ನು ಬಿಎಂಆರ್‌ಸಿಎಲ್ ಮಾಡಿಕೊಂಡಿದೆ. ದರ ಎಷ್ಟರ ಮಟ್ಟಿಗೆ ಹೆಚ್ಚಿಸಬೇಕು ಎಂಬುದರ ಬಗ್ಗೆ ಬಿಎಂಆರ್‌ಸಿಎಲ್ ಈ ಮೊದಲು ಅ.21ರವರೆಗೆ ಜನತೆಯಿಂದ ಅಭಿಪ್ರಾಯ ಕೇಳಿತ್ತು. ಈ ಅವಧಿಯಲ್ಲಿ ಬಹುತೇಕರು ದರ ಹೆಚ್ಚಳಕ್ಕೆ ವಿರೋಧಿಸಿದ್ದಾರೆ.