ಕಡಬ: ನಾಪತ್ತೆಯಾಗಿದ್ದ ತಾಯಿ ಮತ್ತು ಮಕ್ಕಳು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಮಾ.17. ಕಳೆದ ಡಿಸೆಂಬರ್ ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಮಹಿಳೆಯನ್ನು ಶುಕ್ರವಾರದಂದು ಕಡಬ ಪೊಲೀಸರು ಕಾಸರಗೋಡು ಸಮೀಪ ಪತ್ತೆಹಚ್ಚಿ ಕರೆತಂದಿದ್ದಾರೆ.

2017 ಡಿಸೆಂಬರ್ 18 ರಂದು ಐತ್ತೂರು ಗ್ರಾಮದ ಓಟಕಜೆ ನಿವಾಸಿ ಸೆಲ್ವಕುಮಾರ್ ಎಂಬವರ ಪತ್ನಿ ಶ್ರೀಮತಿ ಜ್ಯೋತಿ ಮಲಾರ್ ಹಾಗೂ ಮಕ್ಕಳಾದ ನಿದೀಶ್(7) ವರ್ಷಿಣಿ(9) ನಾಪತ್ತೆಯಾಗಿದ್ದರು. ಈ ಬಗ್ಗೆ ತನಿಖೆ ಮುಂದುವರಿಸಿದ ಕಡಬ ಪೊಲೀಸರು ಶುಕ್ರವಾರದಂದು ಕಾಸರಗೋಡಿನ ಕಿನ್ನಿಂಗಾರು ಎಂಬಲ್ಲಿ ಪತ್ತೆಹಚ್ಚಿದ್ದು, ಮಹಿಳೆಯನ್ನು ಆಕೆಯ ತಾಯಿಯ ಜೊತೆ ಕಳುಹಿಸಿಕೊಡಲಾಗಿದೆ. ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಶಿವಪ್ರಸಾದ್, ಪ್ರಕಾಶ್ ಹಾಗೂ ಭಾಗ್ಯಮ್ಮ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Also Read  ಪತಿಯ ಪ್ರೇಮವನ್ನು ಅಪೇಕ್ಷಿಸುತ್ತಿದ್ದೀರಾ? ಹೀಗೆ ಮಾಡಿ

error: Content is protected !!
Scroll to Top