ಮರ್ಧಾಳ ಶೌರ್ಯ ಘಟಕದ ಮಾಸಿಕ ಸಭೆ- ಯೋಜನೆಯ ಕಾರ್ಯಕ್ರಮಗಳ ಸಂಪೂರ್ಣ ಅರಿವು ಘಟಕದ ಸ್ವಯಂ ಸೇವಕರಲ್ಲಿರಬೇಕು- ರವಿಪ್ರಸಾದ್ ಆಲಾಜೆ

(ನ್ಯೂಸ್ ಕಡಬ) newskadaba.com ಅ. 21. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯದ ಮರ್ಧಾಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಕ್ಟೋಬರ್ ತಿಂಗಳ ಮಾಸಿಕ ಸಭೆಯು ಬಿಳಿನೆಲೆ ವಲಯದ ಕಛೇರಿಯಲ್ಲಿ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಶೌರ್ಯಘಟಕದ ಸ್ವಯಂ ಸೇವಕರುಗಳು ಸಾಮಾಜಿಕ ಸೇವೆ ಹಾಗೂ ವಿಪತ್ತು ಸೇವೆಯಲ್ಲಿ ತೊಡಗಿಕೊಳ್ಳುವುದರಿಂದ ಬಿಳಿನೆಲೆ ವಲಯದ ಜನರಲ್ಲಿ ವಿಪತ್ತಿನ ಬಗ್ಗೆ ಭಯವನ್ನು ಹೋಗಲಾಡಿಸಿ ಬರವಸೆಯನ್ನು ಮೂಡಿಸಲು ಸಹಕಾರಿಯಾಗಿರುತ್ತದೆ. ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರುಗಳಾದ ತಾವೆಲ್ಲರೂ ಒಕ್ಕೂಟದ ಅಧ್ಶಕ್ಷರುಗಳಾಗಿ ಪಧಾದಿಕಾರಿಗಳಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ. ಪ್ರತೀ ಸ್ವಯಂ ಸೇವಕರಲ್ಲಿ ಯೋಜನೆಯ ಪ್ರಗತಿಬಂಧು ಕಾರ್ಯಕ್ರಮಗಳ ಸಂಪೂರ್ಣ ತಿಳುವಳಿಕೆ ಅತೀ ಅಗತ್ಶವಾಗಿದೆ.

Also Read  ಕೊಳೆತ ಸ್ಥಿತಿಯಲ್ಲಿ‌ ಖ್ಯಾತ ವಕೀಲರ ಮೃತದೇಹ ಪತ್ತೆ..!

ಶೌರ್ಯ ಸ್ವಯಂ ಸೇವಕರುಗಳ ಆನಾರೋಗ್ಶದ ಸಂದರ್ಭ ಚಿಕಿತ್ಸಾ ವೆಚ್ಚಕ್ಕಾಗಿ 75,000 ಸಾವಿರದವರೆಗೆ ಉಚಿತವಾದ ಸಹಾಯಧನವನ್ನು ಪೂಜ್ಯರು ಕಲ್ಪಿಸಿದ್ದು ಅನಾರೋಗ್ಶದ ಸಂದರ್ಭದಲ್ಲಿ ಈ ಸೌಲಭ್ಶದ ಸದುಪಯೋಗವನ್ನೂ ಪಡೆದುಕೊಳ್ಳಬಹುದು. ಸಂಘಗಳ ಆರ್ಥಿಕ ವ್ಶವಹಾರದ ಬಗ್ಗೆ ಅನುದಾನ ಕಾರ್ಯಕ್ರಮದ ಬಗ್ಗೆ ಹಾಗೂ ವಾರ್ಷಿಕ ಕ್ರಿಯಾ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಾಗ ಕಷ್ಟದಲ್ಲಿರುವ ಕುಟುಂಬಗಳಿಗೆ ಇನ್ನಷ್ಟು ನೆರವು ನೀಡಿ ಆರ್ಥಿಕವಾಗಿ ಸದೃಢವಾಗಿಸಲು ಸಹಕರಿಸಬಹುದು. ಸಮಾಜದ ಮುಖ್ಯವಾಹಿನಿಗೆ ಪ್ರತಿಯೊಬ್ಬರೂ ಬರಬೇಕೆನ್ನುವುದು ಪೂಜ್ಶರ ಆಶಯವಾಗಿದ್ದು, ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರೂ ಪೂಜ್ಯರ ಆಶಯಗಳನ್ನು ಅರ್ಥೈಸಿಕೊಂಡು ಶ್ರಮಿಸಿದಾಗ ಸ್ಥಳೀಯವಾಗಿ ಗುರುತಿಸಿಕೊಳ್ಳಲೂ ಸಹಕಾರಿಯಾಗುತ್ತದೆ. ಘಟಕದ ಮುಂದಿನ ತಿಂಗಳ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಪ್ರತೀ ತಿಂಗಳಿಗೊಮ್ಮೆ ಘಟಕದ ಮಾಸಿಕ ಸಭೆ ಹಾಗೂ ಸಾಮಾಜಿಕ ಸೇವೆಯಲ್ಲಿ ಎಲ್ಲಾ ಸ್ವಯಂ ಸೇವಕರುಗಳು ತೊಡಗಿಕೊಳ್ಳುವುದರಿಂದ ಘಟಕದ ಅಸ್ತಿತ್ವ ಇನ್ನಷ್ಟೂ ಪ್ರಬಲವಾಗುತ್ತದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಘಟಕದ ಪ್ರತಿನಿಧಿ ಭವಾನಿಶಂಕರ್ ವಹಿಸಿದ್ದರು. ವಲಯಾಧ್ಶಕ್ಷರಾದ ಸಂತೋಷ್ ಕೇನ್ಯ ಉಪಸ್ಥಿತರಿದ್ದರು. ಘಟಕ ಸಂಯೋಜಕಿ ಜ್ಞಾನಶೇಲ್ವೀ ಸ್ವಾಗತಿಸಿ, ಘಟಕದ ಸ್ವಯಂ ಸೇವಕರಾದ ವಿನಯ್ ಕುಮಾರ್ ಧನ್ಶವಾದ ನೀಡಿದರು.

error: Content is protected !!
Scroll to Top