ಸರ್ವರ್ ಸ್ಥಳಾಂತರ: ರಾಜ್ಯದಾದ್ಯಂತ ಪಡಿತರ ವಿತರಣೆಯಲ್ಲಿ ಸಮಸ್ಯೆ

(ನ್ಯೂಸ್ ಕಡಬ) newskadaba.com .19 ಚಿತ್ರದುರ್ಗ:  ಎನ್‌ಐಸಿ ದಿಂದ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರಕ್ಕೆ(ಕೆಎಸ್‌ಡಿಸಿ) ಸರ್ವರ್‌ ಸ್ಥಳಾಂತರಗೊಂಡಿರುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ತಿಂಗಳ ಪಡಿತರ ವಿತರಣೆಯಲ್ಲಿ ತೊಂದರೆ ಉಂಟಾಗಿದೆ.

ಅವಳಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಇತರ ಭಾಗಗಳಲ್ಲಿನ ಪಿಡಿಎಸ್ ಅಂಗಡಿಗಳ ಮುಂದೆ ಫಲಾನುಭವಿಗಳು ದೊಡ್ಡ ಕ್ಯೂಗಳಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಯಿತು. ಹೊಸ ಸರ್ವರ್‌ನಲ್ಲಿ ಡೇಟಾ ಲಭ್ಯವಿಲ್ಲದ ಕಾರಣ ಅವರಲ್ಲಿ ಕೆಲವರು ಬರಿಗೈಯಲ್ಲಿ ಹಿಂತಿರುಗಿದರು. ಇನ್ನು ಕೆಲವರು ಸರ್ವರ್ ವೈಫಲ್ಯದಿಂದ ಪಡಿತರ ಸಿಗದೆ ವಾಪಸ್ಸಾಗಬೇಕಾಯಿತು.ರಾಷ್ಟ್ರೀಯ ಮಾಹಿತಿ ಕೇಂದ್ರದ ಸರ್ವರ್‌ನಲ್ಲಿ ಸೃಷ್ಟಿಯಾದ ಹಲವು ಸಮಸ್ಯೆಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೊಸ ಸರ್ವರ್ ಅನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ ಗೆ ಸ್ಥಳಾಂತರಿಸಲಾಗಿದೆ.

Also Read  ಪ್ರೀತಂ ಗೌಡ ಎಷ್ಟೇ ಹಣ ಖರ್ಚು ಮಾಡಿದರೂ ಆತನ ಸೋಲನ್ನು ನಾನು ಕಣ್ಣಿನಿಂದ ನೋಡಬೇಕು...! ➤ಎಚ್.ಡಿ. ದೇವೇಗೌಡ

error: Content is protected !!
Scroll to Top